ವೇಗವಾಗಿ ಬರುತ್ತಿದ್ದ ಅಂಬ್ಯುಲೆನ್ಸ್ – ಬೈಕ್ ಗೆ ಡಿಕ್ಕಿ : ಗಂಭೀರ ಗಾಯಗೊಂಡ ಸವಾರರು 

ಉತ್ತರ ಕನ್ನಡ : ವೇಗವಾಗಿ ಬರುತ್ತಿದ್ದ ಅಂಬ್ಯುಲೆನ್ಸ್ ಎದುರಿನಿಂದ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ತಂದೆ ಮತ್ತು ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸಾಗರ ರಸ್ತೆಯ ಸಬ್ಬತ್ತೆ ಕ್ರಾಸ್ ಬಳಿ ನಡೆದಿದೆ.

ಅತೀ ವೇಗವಾಗಿ ಭಟ್ಕಳದಿಂದ ಕೋಣಾರ ಕಡೆಗೆ ಹೋಗುತ್ತಿದ್ದ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ಸೇರಿದ ಅಂಬ್ಯುಲೆನ್ಸ್, ಕೋಣಾರದಿಂದ ಭಟ್ಕಳದ ಕಡೆಗೆ ಬೈಕ್ ನಲ್ಲಿ ತಂದೆ ಮಗಳು ಬರುತ್ತಿದ್ದ ವೇಳೆ ಅಂಬ್ಯುಲೆನ್ಸ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ ಮತ್ತು ಮಗಳ ಕಾಲುಗಳು ಮುರಿದಿದೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಕೋಣಾರ ನಿವಾಸಿ ಕೃಷ್ಣ ಲಚ್ಮಯ್ಯ ನಾಯ್ಕ,  ಈತನ ಮಗಳು ಸುಚಿತ್ರ ಕೃಷ್ಣ ನಾಯ್ಕ , ಕಾವ್ಯ ವೆಂಕಟರಮಣ ನಾಯ್ಕ ಎಂದು ತಿಳಿದು ಬಂದಿದೆ.

ಹೆಚ್ಚಿನ ಚಿಕಿತ್ಸೆಗಾಗಿ ತಂದೆ ಮತ್ತು ಮಗಳನ್ನು ಉಡುಪಿ ಜಿಲ್ಲೆಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಅಂಬ್ಯುಲೆನ್ಸ್ ಚಾಲಕ ರಾಜಾ ಸಾಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com