ಮೈಸೂರು : ಲೇಡಿಸ್ ಹಾಸ್ಟೆಲ್ ಗೆ ನುಗ್ಗಿದ್ದ ಸೈಕೋ ಕಳ್ಳ : ಕಂಗಲಾದ ವಿದ್ಯಾರ್ಥಿನಿಯರು

ಮೈಸೂರು : ಸಾಂಸ್ಕೃತಿಕ ನಗರ ಮೈಸೂರಿನ ಕೆಆರ್ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಸೈಕೋ ಕಳ್ಳನೊಬ್ಬ ನುಗ್ಗಿ ದಾಂಧಲೆ ನಡೆಸಿ ವಿದ್ಯಾರ್ಥಿನಿಯರಿಗೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಸುಮಾರು 30 ವರ್ಷ ಇತಿಹಾಸವಿರುವ ಕೆ ಆರ್ ಆಸ್ಪತ್ರೆಯ ನರ್ಸಿಂಗ್ ಹಾಸ್ಟೆಲ್‌‌ ನ ಹಿಂಭಾಗದಿಂದ ಕಾಂಪೌಂಡ್ ಹಾರಿ ಬಂದು ವಿಕೃತ ಕಾಮಿ ಧಾಂದಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ರಂತಸ್ತಿನ  ಕಟ್ಟಡ ಏರಿ ಒಳ ನುಗ್ಗಿ ವಿದ್ಯಾರ್ಥಿನಿಯರಿಗೆ ಹಲ್ಲೆ ಮಾಡಿರುವ ವಿಕೃತ ಕಾಮಿ ಸೈಕೋ ಕಳ್ಳ  ವಿದ್ಯಾರ್ಥಿನೀಯ ಮೊಬೈಲ್ ಕಸಿದು ಕೊಂಡಿದ್ದಾನೆ. ಸೈಕೊ ಕಳ್ಳನ ಕೃತ್ಯ ನೋಡಿದ ವಿದ್ಯಾರ್ಥಿನಿಗೆ ಸೈಕೋ ಕಳ್ಳ  ಕತ್ತು ಹಿಸುಕಿ ಅಸಭ್ಯವಾಗಿ ವರ್ತನೆ ತೋರಿದ್ದಾನೆ. ಜತೆಗೆ ಹಾಸ್ಟೆಲ್ ಒಳ ಭಾಗದಲ್ಲಿ ಒಣಗಿ ಹಾಕಿದ್ದ  ಬಟ್ಟೆಗಳನ್ನು ಮೈಗೆ ಉಜ್ಜಿಕೊಂಡು ಒಳುಡುಪುಗಳನ್ನ ತೆಗೆದುಕೊಂಡು ಹೋಗಿದ್ದಾನೆ.

ಕಳೆದ 20ರಂದು ಈ ಘಟನೆ ನಡೆದಿದ್ದು, ಅಂದು ಬೆಳಗಿನ ಜಾವ ಸುಮಾರು 3 ಗಂಟೆವರೆಗೂ ಹಾಸ್ಟೆಲ್ ಸರೌಂಡಿಂಗ್ ನಲ್ಲಿಯೇ ಇದ್ದನು.  ಸೆಕ್ಯೂರಿಟಿ ಗಾರ್ಡ್ , ಸಿಸಿಟಿವಿ ಇದ್ದರೂ ಹೆದರದೆ ಸೈಕೋ ಕಳ್ಳ ಈ ಕೃತ್ಯವೆಸಗಿದ್ದಾನೆ.  ಈ ಹಾಸ್ಟೆಲ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿನೀಯರೇ ಇದ್ದು ಸೈಕೊ ವರ್ತನೆ ನೋಡಿ ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ.

ಇನ್ನು ಖಾಕಿ ಬಟ್ಟೆ ಹಾಕಿಕೊಂಡಿದ್ದ ಸೈಕೊ ಮದ್ಯದ ನಶೆಯಲ್ಲಿದ್ದ  ಎಂದು ಹಾಸ್ಟೆಲ್ ವಿದ್ಯಾರ್ಥಿನಿಯರು ತಿಳಿಸಿದ್ದು,ಈ ಕುರಿತು  ಪ್ರಕರಣ ದಾಖಲು ಮಾಡಿಕೊಂಡಿರುವ ದೇವರಾಜ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com