ಮೈಸೂರು : ರಾಮದಾಸ ಮನೆಮುಂದೆ ‘ಪ್ರೇಮ’ಕುಮಾರಿ ಹೈಡ್ರಾಮ

ಮೈಸೂರು : ಮತ್ತೊಮ್ಮೆ ಬೀದಿಗೆ ಬಿತ್ತು ಪ್ರೇಮಕುಮಾರಿ ಹಾಗೂ ರಾಮದಾಸ ಪ್ರೇಮಪುರಾಣ. ಹೌದು ಕೆ.ಆರ್ ಕ್ಷೇತ್ರದ ಬಿಜೆಪಿ ಶಾಸಕ ಎ. ರಾಮದಾಸ ಅವರ ಕಚೇರಿ ಮುಂಭಾಗದಲ್ಲಿ ಪ್ರೇಮಕುಮಾರಿ ಹೈಡ್ರಾಮಾ ನಡೆಸಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಕಚೇರಿ ಮುಂದಿನ ನೆಲದ ಮೇಲೆ ಉರುಳಾಡಿ ಗೋಳಾಡುತ್ತ ಪ್ರತಿಭಟನೆ ನಡೆಸಿದ ರಾಮದಾಸ್ ಅವರ ಮಾಜಿ ಪ್ರಿಯತಮೆ ಪ್ರೇಮಕುಮಾರಿ,ಚುನಾವಣೆ ವೇಳೆ ಕೊಟ್ಟಿದ್ದ ಮಾತು ತಪ್ಪಿದ್ದಾರೆ. ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ನಾಮಪತ್ರ ನೀಡದಂತೆ ತಡೆದಿದ್ದರು, ಎಂದು ಆರೋಪಿಸಿ ಸಾಯುವುದಾಗಿ ಬೆದರಿಕೆ ಒಡ್ಡಿದರು.

ತಾವು ಹಾಕಿಕೊಂಡಿದ್ದ ವೇಲ್‌ನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮನವೊಲಿಕೆಗೂ ಜಗ್ಗದ ಪ್ರೇಮಕುಮಾರಿ ಅವರನ್ನು ಪೊಲೀಸರು ವಿದ್ಯಾರಣ್ಯಪುರಂ ಠಾಣೆಗೆ ಕರೆದೊಯ್ದರು.

Leave a Reply

Your email address will not be published.