ನನ್ನ ಎಲ್ಲಾ ಸಮಯವು ದೇಶಕ್ಕೆ ಮುಡಿಪು : ಅಭಿಮಾನಿ ಪ್ರಶ್ನೆಗೆ ಮೋದಿ ಉತ್ತರ…!

 ನವದೆಹಲಿ : ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಮಂಡನೆಯಲ್ಲಿ ಗೆದ್ದುಬಂದು ವಾರವಿಡೀ ಸದನದ ಕಲಾಪದಲ್ಲಿ ಬ್ಯುಸಿಯಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ನಿರಾಳರಾದಂತೆ ಕಂಡುಬಂದರು. ಟ್ವಿಟ್ಟರ್ ನಲ್ಲಿ ನಾನು ಆಗಾಗ ಸಂತೋಷವನ್ನು ಮುಖದಲ್ಲಿ ತೋರಿಸುತ್ತೇನೆ ಎಂದರು. 

ಈ ದೇಶದ 125 ಕೋಟಿ ಭಾರತೀಯರ ಆಶೀರ್ವಾದ ನನಗೆ ಶಕ್ತಿ ನೀಡುತ್ತದೆ ಎಂದು ಟ್ವಿಟ್ಟರ್ ನಲ್ಲಿ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೂ ಪ್ರಧಾನಿ ಮೋದಿ ಉತ್ತರಿಸಿದ್ದಾರೆ. ಮುಂಬೈ ಮೂಲದ ಶಿಲ್ಪಿ ಅಗರ್ವಾಲ್ ಅವರು ಪ್ರಧಾನಿಗಳೇ ನೀವು ನಗುತ್ತಿರಬೇಕು, ಬಾಕಿ ಎಲ್ಲಾ ಚೆನ್ನಾಗಿದೆ ಎಂದು ಕೇಳಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿ, ನೀವು ಹೇಳಿರುವುದನ್ನು ತೆಗೆದುಕೊಂಡಿದ್ದೇನೆ ಎಂದು ನಗುವ ಎಮೋಜಿಯನ್ನು ಹಾಕಿದ್ದರು. 

60-70ರ ಹೊಸ್ತಿನಲ್ಲಿಯೂ ನೀವು ಬಳಲದಂತೆ ಹೇಗೆ ಇರುತ್ತೀರಿ ಎಂದು ಕೇಳಿದ್ದಕ್ಕೆ ಮೋದಿಯವರು, ‘ಈ ದೇಶದ 125 ಕೋಟಿ ಜನರ ಆಶೀರ್ವಾದ ನನಗೆ ಶಕ್ತಿ ನೀಡುತ್ತದೆ. ನನ್ನ ಎಲ್ಲಾ ಸಮಯವು ದೇಶಕ್ಕೆ’ ಎಂದು ಉತ್ತರಿಸಿದ್ದಾರೆ.#IndiaTrustModi ಎಂಬ ಹ್ಯಾಶ್ ಟಾಗ್ ನೊಂದಿಗೆ ಕಳೆದ ಶುಕ್ರವಾರ ಲೋಕಸಭೆಯಲ್ಲಿ ಅವಿಶ್ವಾಸ ಮತ ಗೆದ್ದದ್ದಕ್ಕೆ ಶೋಭಾ ಶೆಟ್ಟಿ ಎಂಬುವವರು ಅಭಿನಂದನೆ ಸಲ್ಲಿಸಿ ಕರ್ಮ ಯೋಗಿ ಎಂದು ಕರೆದಿದ್ದರು. ಅದಕ್ಕೆ ಮೋದಿ ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು ಎಂದು ಉತ್ತರಿಸಿದ್ದಾರೆ. 

Leave a Reply

Your email address will not be published.