ಬಿಹಾರ : ಎಸ್ ಸಿ, ಎಸ್ ಟಿ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ಪ್ರಕಟ….!

ಮೀಸಲಾತಿ ಅಡಿ ಎಸ್​ಸಿ, ಎಸ್​ಟಿ ನೌಕರರಿಗೆ ಬಡ್ತಿ ಒದಗಿಸಲು ಇದೇ ಮೇ 17 ಹಾಗೂ ಜೂನ್​ 6ರಂದು ಸುಪ್ರೀಂಕೋರ್ಟ್​ ಅನುಮತಿ ನೀಡಿತ್ತು.
ಇದರ ಆಧಾರದ ಮೇಲೆ ಕೇಂದ್ರದ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯು ಜೂನ್​ 27ರಂದು ಬಡ್ತಿ ನೀಡುವ ಸಂಬಂಧ ಸಲಹೆ ನೀಡಿತ್ತು.  ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಏಳು ಸದಸ್ಯರ ಸಮಿತಿಯನ್ನು ಬಿಹಾರ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿಯ ಶಿಫಾರಸ್ಸು ಅನ್ವಯ ಸರ್ಕಾರಿ ನೌಕರರಿಗೆ ಬಡ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಇದೇ ವೇಳೆ ಮುಂದೆ ಸರ್ವೋಚ್ಚ ನ್ಯಾಯಾಲಯ ಪ್ರಕಟಿಸುವ ಆದೇಶಕ್ಕೆ ಅನುಗುಣವಾಗಿ ಬಡ್ತಿ ನೀಡಲಾಗುತ್ತಿದೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com