ಬೀದರ್ : ದೇಹ ಒಂದೇ ತಲೆ ಎರಡು, ವಿಚಿತ್ರ ಕರುವಿಗೆ ಜನ್ಮ ನೀಡಿದ ಹಸು…!

ಬೀದರ್: ಒಂದೇ ದೇಹಕ್ಕೆ ಎರಡು ತಲೆಯುಳ್ಳ ಆಕಳು ಕರುವೊಂದು ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ಜನಿಸಿದೆ.

ನಾರಾಯಣಪೂರ ಗ್ರಾಮದ ಈರಪ್ಪ ಮೂಲಗೆ ಎನ್ನುವರಿಗೆ ಸೇರಿದ ಆಕಳು ಈ ವಿಚಿತ್ರವಾದ ಕರುವಿಗೆ ಜನ್ಮ ನೀಡಿದೆ. ಅಪರೂಪವಾಗಿರುವ ಇಂಥ ಪ್ರಕರಣಗಳಲ್ಲಿ ಸಾಮಾನ್ಯ ಹೆರಿಗೆ ಆಗದು. ಶಸ್ತ್ರ ಚಿಕಿತ್ಸೆ ಮಾಡಿಯೇ ಹೆರಿಗೆ ಮಾಡಿಸಬೇಕಾಗುತ್ತದೆ. ಆದರೆ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಇಲ್ಲಿಯ ನುರಿತ ಮತ್ತು ನಿವೃತ್ತ ಜನುವಾರು ಅಧಿಕಾರಿ ಮೀರ ಕಾಜೀಮ ಅಲಿ ಅವರು ಆಕಳಿಗೆ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೇ ಸಾಮಾನ್ಯ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಶು ಅಸ್ಪತ್ರೆ ಸಹಾಯಕ ನಿರ್ದೇಶಕ ಡಾ.ರವೀಂದ್ರನಾಥ ಅವರ ಮಾರ್ಗದರ್ಶನದಲ್ಲಿ ಕಾಜಿಮ್‍ ಅಲಿ ಅವರು ಆಕಳನ್ನು ಪರೀಕ್ಷಿಸಿ, ಹೊಲದಲ್ಲಿಯೇ ಕೆಲ ನಿಮಿಷಗಳಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಈ ವಿಚಿತ್ರ ಹಸುವಿನ ಕರು ನೋಡಲು ಸುತ್ತಲಿನ ಜನರು ಕುತೂಹಲದಿಂದ ಬರುತ್ತಿದ್ದಾರೆ.

Leave a Reply

Your email address will not be published.