ಲಾರಿ ಮತ್ತು ಸ್ಕೂಟರ್ ಡಿಕ್ಕಿಯಾಗಿ ಯುವತಿ ಸಾವು : ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

 ಬೆಂಗಳೂರು : ಕಾಂಕ್ರೀಟ್ ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಲಾಲ್​ಬಾಗ್​ ಸಮೀಪ ನಡೆದಿದೆ.  19 ವರ್ಷದ ಪ್ರೀತಿ ಮೃತ ದುರ್ದೈವಿ.
ಮೃತ ಪ್ರೀತಿ ಸುರಾನ ಕಾಲೇಜ್ ನಲ್ಲಿ ಫ್ರಥಮ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದು, ಅಪಘಾತ ನಡೆದ ವೇಳೆ ಸ್ಕೂಟರ್ ಹಿಂಭಾಗದಲ್ಲಿ ಕುಳಿತಿದ್ದ 24ವರ್ಷದ ಲಾವಣ್ಯಗೆ ಗಂಭೀರ   ಗಾಯಗಳಾಗಿದ್ದು. ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿಸಲಾಗಿದೆ.ಲಾವಣ್ಯ ಹಾಗೂ ಪ್ರೀತಿ ಸೋದರಿಯರಾಗಿದ್ದು ಅಪಘಾತದ ತೀವ್ರತೆಗೆ ಸ್ಕೂಟರ್ ಸಂಪೂರ್ಣ ನುಜ್ಜುಗುಜ್ಜಾಗಿದೆ.
 Bengaluru: Young girl donates her eyes after her dead in lorry-bike collision
 ಮೃತ ಪ್ರೀತಿಯ ಪೋಷಕರು ಆಕೆ ಕಣ್ಣುಗಳ ದಾನಕ್ಕೆ ಸಮ್ಮತಿ ಸೂಚಿಸುವ ಮೂಲಕ ಸಾವಿನ ದುಃಖದಲ್ಲಿಯೂ ಸಾರ್ಥಕ್ಯತೆ ಮೆರೆದಿದ್ದಾರೆ.ಅಪಘಾತ ನಡೆದ ಸ್ಥಳಕ್ಕೆ ವಿವಿ ಪುರಂ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿ ತನಿಖೆ ಕೈಗೊಂಡಿದ್ದಾರೆ.

2 thoughts on “ಲಾರಿ ಮತ್ತು ಸ್ಕೂಟರ್ ಡಿಕ್ಕಿಯಾಗಿ ಯುವತಿ ಸಾವು : ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

Leave a Reply

Your email address will not be published.

Social Media Auto Publish Powered By : XYZScripts.com