ಶ್ರೀನಗರ : ಕಾಶ್ಮೀರದಲ್ಲಿ ಬೆಳ್ಳಂ ಬೆಳಗ್ಗೆ ಮೂರು ಉಗ್ರರ ಹತ್ಯೆ : ಮುಂದುವರೆದ ಕಾರ್ಯಚರಣೆ

ಶ್ರೀನಗರ : ಜಮ್ಮು – ಕಾಶ್ಮೀರದಲ್ಲಿ ಇಂದು ಬೆಳ್ಳಂ ಬೆಳಗ್ಗೆ  ಗುಂಡಿನಕಾಳಗ ಶುರುವಾಗಿದ್ದು, ಎನ್​ಕೌಂಟರ್​ನಲ್ಲಿ ಮೂವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಪೊಲೀಸ್ ಕಾನ್ಸ್ ಟೇಬಲ್ ಕೊಂದ ಸ್ಥಳದಲ್ಲಿ ಉಗ್ರರು ಅಡಗಿರುವ ಬಗ್ಗೆ ರಹಸ್ಯ ಮಾಹಿತಿ ಪಡೆದು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡಿವೆ.  ಭದ್ರತಾ ಪಡೆಗಳು ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ನಂತರ ಶೋಧ ಕಾರ್ಯಾಚರಣೆ  ಹಠಾತ್,ಎನ್ ಕೌಂಟರ್ ಆಗಿ ಬದಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರಜೆಯ ಮೇಲೆ ಕುಲ್ಗಾಂನಲ್ಲಿರುವ  ಮನೆಯಲ್ಲಿದ್ದಾಗ ಅವರನ್ನು ಅಪಹರಿಸಿ ಹತ್ಯೆಗೈಯಲಾಗಿತ್ತು.ರಾಜ್ಯ ಪೊಲೀಸ್ ಹಾಗೂ ಸೇನೆಯೊಂದಿಗೆ  ಸಿಆರ್ ಪಿಎಫ್ ಪೊಲೀಸರು  ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

Image result for jammu and kashmir soldier

ಶ್ರೀನಗರದಿಂದ 70  ಕಿಲೋ ಮೀಟರ್ ದೂರದಲ್ಲಿರುವ ಕುಲ್ಗಾಂ ಖುದ್ವಾನಿ ಬಳಿ ಕಾರ್ಯಾಚಾರಣೆ ನಡೆಯುತ್ತಿದ್ದು, ನಾಲ್ವರು ಉಗ್ರರಿರುವ ಬಗ್ಗೆ ಭದ್ರತಾ ಪಡೆಗಳು ಅನುಮಾನ ವ್ಯಕ್ತಪಡಿಸಿದ್ದು, . ಕೆಲ ವ್ಯಕ್ತಿಗಳು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 

Leave a Reply

Your email address will not be published.