ಬಿಗ್ ಬ್ರೇಕಿಂಗ್ : ಶೀರೂರು ಶ್ರೀಗಳ ಸಾವಿಗೆ ಮತ್ತೊಂದು ತಿರುವು, ಪೊಲೀಸ್ ವಶಕ್ಕೆ ಮಹಿಳೆ..!

ಉಡುಪಿ : ಶೀರೂರು ಶ್ರೀ ಅನೂಮಾನಾಸ್ಪದ ಸಾವಿಗೆ ಮತ್ತೋಂದು ತಿರುವು,  ಶೀರೂರು ಸ್ವಾಮಿಗಳ ಕೊಲೆಯೋ ಅಥವಾ ಸಹಜ ಸಾವು ಅನ್ನೋದಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದು ಈ ವೇಳೆ ಬ್ರಹ್ಮಾವರದ ಮಹಿಳೆ ರಮ್ಯಾ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತೀ ಸೋಮವಾರ ಮಠಕ್ಕೆ ಬರುತ್ತಿದ್ದ ಮಹಿಳೆ ಅಲ್ಲೇ ಉಳಿಯುತ್ತದ್ದು, ಆಕೆಯ ಜೊತೆಗೆ ಆಕೆಯ ತಾಯಿಯೂ ಬರುತ್ತಿದ್ದರು, ರಮ್ಯಾಳ ಮೂಲತ ಸಿರ್ಸಿಯವಳು ಎಂದು ತಿಳಿದುಬಂದಿದೆ. ಹಲವು ಬಾರಿ ರಾತ್ರಿ ಮೂಲಮಠದಲ್ಲಿ ತಂಗುತ್ತಿದ್ದ ರಮ್ಯಾ, ಇತ್ತೀಚೆಗೆ ಮೂಲಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಳು ಹಾಗೂ ಕೆಲಸಗಾರಿಗೆ ಸಂಬಳ ಕೊಡಲು ಸೋಮವಾರ ಮಠಕ್ಕೆ ಬಂದಿದ್ದಳು ಎಂಬುದು ಸಿಸಿಟಿವಿಯಲ್ಲಿ ಲಭ್ಯವಾಗಿದೆ. ಇದಕ್ಕೆ ಸಂಬಂಧ ಪೋಲೀಸರು ಪ್ರಾಥಮಿಕ‌ ತನಿಖೆ‌ ನಡೆಸುತ್ತಿದ್ದಾರೆ.

ಶಿರೂರು ಶ್ರೀಗಳಿಗೆ ಮೊದಲಿನಿಂದಲೂ ಅನಾರೋಗ್ಯವಿತ್ತು. ಮದ್ಯ ಸೇವಿಸುತ್ತಿದ್ದರು, ಹೆಂಗಸರ ಸಹವಾಸವಿತ್ತು, ಹೆಂಗಸರ ಜಗಳವೂ ಸಾವಿಗೆ ಕಾರಣವಿರಬಹುದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಈ ಬೆನ್ನಲ್ಲೆ ಮಹಿಳೆಯೊಬ್ಬರನ್ನು ತನಿಖಾ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.

 

Leave a Reply

Your email address will not be published.

Social Media Auto Publish Powered By : XYZScripts.com