“ಪರ್ಯಾಯ ಅಂದ್ರೆ ಎಂತಾ ಗೊತ್ತಾ? ಕೃಷ್ಣ ಮಠದ ಹಣ ಮಾಡುವ ಸ್ಕೀಮ್” -ಶಿರೂರು ಸ್ವಾಮಿ

ಶಿರೂರು ಸ್ವಾಮಿಗೂ ಅಷ್ಟಮಠದ ಇತರ ಸ್ವಾಮಿಗಳಿಗೂ ನಡುವಿನ ತಿಕ್ಕಾಟಕ್ಕೆ ವರ್ಷಗಳ ಇತಿಹಾಸವಿದೆ. ಕೆಲವರ್ಷಗಳ ಹಿಂದೆ ಶಿರೂರು ಶ್ರೀಗಳೊಂದಿಗೆ ನಡೆಸಿದ ವ್ಯಕ್ತಿಯೊಬ್ಬರು ನಡೆಸಿದ ಸಂಭಾಷಣೆಯನ್ನು ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿತ್ತು. ಈ ವಿಡಿಯೋ ಟಿವಿ ಮಾಧ್ಯಮಗಳಲ್ಲೂ ಪ್ರಚಾರವಾಗಿತ್ತು. ಈ ವಿಡಿಯೋದಲ್ಲಿ ಕೃಷ್ಣಮಠದ ಆಂತರಿಕ ವ್ಯವಹಾರಗಳ ಬಗ್ಗೆ, ಅಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಹಾಗೂ ಸ್ವಾಮಿಗಳ ಅನೈತಿಕ ನಡವಳಿಕೆಗಳ ಬಗ್ಗೆ ಶಿರೂರು ಬಹಳ ಮುಕ್ತವಾಗಿ ಮಾತಾಡಿದ್ದಾರೆ. ಆ ವಿಡಿಯೋ ಸಂಭಾಷಣೆಯ ಆಯ್ದ ಭಾಗವನ್ನು ಯಥಾವತ್ ಅಕ್ಷರ ರೂಪದಲ್ಲಿ ಇಲ್ಲಿ ಕೊಟ್ಟಿದ್ದೇವೆ.


……… …. …..
ವ್ಯಕ್ತಿ: ಮಠದಲ್ಲಿ ಆಗ ಕೊಲೆ ನಡೆದಿದ್ದು ಹೌದಾ ?
ಸ್ವಾಮೀಜಿ: ಕೊಲೆ ಮಾಡಿದ್ದಾರೆ, ಈ ಸ್ವಾಮಿಗಳನ್ನು ಇದು ಮಾಡುವಾಗ ನಾಲ್ಕು ಮರ್ಡರ್ ಮಾಡಿ ಕೂತ್ಕೊಂಡಿದ್ದಾರೆ ಸೀಟ್‍ನಲ್ಲಿ.. ಹಿಂದಿನ ಸ್ವಾಮಿ ಗೊತ್ತಲ್ಲ. ವಿಶ್ವಮಾನ್ಯರು ಅಂತೇಳಿ.. ಭಾರೀ ಒಳ್ಳೆ ಸ್ವಾಮಿ ಅವ್ರು.. ಭಾಷಣ ಕೇಳಿದಾಗ್ಲೆಲ್ಲಾ ಎದ್ದು ಹೋಗ್ತಾ ಇರಲಿಲ್ಲ ಜನ.. ಮಹಾತ್ಮಗಾಂಧಿಗೂ ಆ ಸ್ವಾಮಿಗೂ ಭಾಳಾ ಸಂಬಂಧ ಇತ್ತು. 1943-44-45 ಆ ಟೈಮ್‍ನಲ್ಲಿ.. ಧಾರವಾಡದಲ್ಲಿ ಮರ್ಡರ್ ಮಾಡಿದ್ರು ಅವ್ರನ್ನ..ಇಡ್ಲಿಗೆ ಪಾಯಿಸನ್ ಹಾಕಿ.. ಎಲ್ಲಾ ಗೊತ್ತು.. ಊರಿಗೆಲ್ಲಾ ಗೊತ್ತು.
ವ್ಯಕ್ತಿ : ಅಷ್ಟಮಠದ ಕೆಲವು ಸ್ವಾಮೀಜಿಗಳಿಗೆ ಮಕ್ಕಳಿದ್ದಾರಲ್ಲಾ ಏನು ಕಥೆ..?


ಸ್ವಾಮೀಜಿ: (ನಗುತ್ತಾ) ಹೌದು, ಎಲ್ಲರಿಗೂ ಇದೆ. ನನಗೂ ಇದೆ. ಅದೇನು ದೊಡ್ಡ ವಿಷ್ಯ ಅಲ್ಲ.. ಆ ಟೈಮ್‍ಗೆ ಆದದ್ದು ದೊಡ್ಡ ವಿಷ್ಯ ಅಲ್ಲ..
ವ್ಯಕ್ತಿ : ಅದು ಪೂರ್ವಾಶ್ರಮದಲ್ಲಾದ ಮಕ್ಕಳಾ ಹೇಗೆ?
ಸ್ವಾಮೀಜಿ: ನೋಡೀ.. ಒಂದು ವಿಷ್ಯ ಹೇಳ್ತೀನಿ, ಎಂಟನೇ ವಯಸ್ಸಿಗೆ ನಮಗೆ ಸನ್ಯಾಸ ಕೊಟ್ರೆ .. ಆವಾಗ ಲೋಕಜ್ಞಾನ ಯಾವ್ದೂ ಇರೋದಿಲ್ಲ ಅಲ್ವಾ.. ಪ್ರಾಯ ಬಂದಹಾಗೆ ಮನುಷ್ಯನಿಗೆ ಆಸೆಗಳು ಹುಟ್ಟಿಕೊಳ್ಳೋಕೆ ಶುರುವಾಗುತ್ತೆ.. ಆ ಟೈಮ್‍ಗೆ ಒಂದು ಘಟನೆ ಆಗಿತ್ತು.. ಅದನ್ನೇ ಹಿಡ್ಕೊಂಡು ಹೇಳ್ಬಾರ್ದು.. ಮತ್ತೆ ಬೇಡ ಅನ್ಸುತ್ತೆ ಮನುಷ್ಯನಿಗೆ.. ಒಂದು ಟೈಮ್ದು ಹಿಡ್ಕೊಂಡು ಯಾವಾಗ್ಲೂ ಹೇಳ್ತಾ ಇದ್ರೆ ಮನುಷ್ಯ.. ಆ ಗುಣ ಮನುಷ್ಯಂದು..

ವ್ಯಕ್ತಿ : ಆ ವಿಷಯದಲ್ಲಿ ನಿಮ್ಮನ್ನ ಮಾತ್ರ ಟಾರ್ಗೆಟ್ ಮಾಡ್ತಾರೆ..
ಸ್ವಾಮೀಜಿ : ಹೂ.. ಅವರಿಗೆಲ್ಲಾ ಉಂಟು ರೀ.. ಬೇಕಾದ್ದು.. ಬೇಕಾದಲ್ಲೆಲ್ಲಾ ಮಾಡ್ತಾರೆ.. ಬ್ಯಾಡದೇ ಇದ್ದ ಜಾತಿಗೆಲ್ಲಾ ಸಂಸದ್ ಎಲ್ಲ ಇಟ್ಕೊಂಡಿದ್ದಾರೆ ಗೊತ್ತುಂಟಾ.. ಎಲ್ರೂ ಕೂಡ, ನಾನು ಮಾತ್ರ ಹೆಸರೇಳೋದಿಲ್ಲ.. ಯಾರ ಮರ್ಯಾದೆ ಹೋಗೋದು? ಉಡುಪಿಯ ಮರ್ಯಾದೆ ಹೋಗುತ್ತೆ.. ಸಂಬಂದ ಇಲ್ಲದವರೂ ಸಂಬಂಧ ಮಾಡಿಕೊಂಡು ಬಂದು ಮಠದಲ್ಲಿ ಕೂತಿದ್ದಾರೆ…
ಸ್ವಾಮಿಯವ್ರಿಗೆ ಮಕ್ಕಳಿಲ್ಲದಿದ್ರೂ ಸ್ವಾಮಿಯವ್ರ ತಮ್ಮನಿಗೆ ಮಕ್ಕಳಿದ್ದಾರಲ್ಲಾ ಅದಕ್ಕೆಂತಾ ಮಾಡೋದು.. ಸ್ವಾಮಿಯವರಿಗೆ ಬಂದ ಹಣವೆಲ್ಲಾ ಸ್ವಾಮಿಯರ ತಮ್ಮನ ಮಕ್ಕಳಿಗೆ, ತಮ್ಮನ ಅಳಿಯನಿಗೆ ಕೋಟಿಗಟ್ಟಲೆ ಹೋಗುವಾಗ.. ಒಂದು ವರ್ಷದಲ್ಲಿ 18 ಕೋಟಿ ಸಂಪಾದನೆ ಮಾಡಿದ್ದೇನೆ ಅಂದ್ರೆ ಹೇಗದು..? ಐಟಿಯವ್ರು ಯಾರತ್ರ ಜೀವ ಇಲ್ವಾ..? ಇಂಕಮ್ ಟ್ಯಾಕ್ಸ್‍ನವ್ರಿಗೆ ಯಾರ್ಗೂ ಜೀವ ಇಲ್ವಾ..? ಕೃಷ್ಣ ಮಠದಲ್ಲಿ ಬಂದು ಹಿಡಿದ್ರಲ್ಲಾ ಇವರನ್ನ. ಮಧ್ಯಾಹ್ನ ಒಂದು ಗಂಟೆಗೆ ಹಿಡಿದು ಸಂಜೆ ಏಳು ಗಂಟೆ ತನಕ.. ಸ್ವಾಮಿಯವರ ಪಿ.ಎ ವಿಷ್ಣು ಅಂತ ಇದ್ದಾನೆ ಗೊತ್ತಾ..? 18 ಕೋಟಿ ಎಲ್ಲಿಂದ ಬಂತು ಅವನಿಗೆ? ಯಾರಪ್ಪ ಕೊಟ್ಟ ಅವನಿಗೆ ಹಣ? ಸ್ವಾಮಿಯರಿಗೆ ಬಂದ ಹಣವನ್ನಲ್ಲವಾ ಒಳಗಾಕಿದ್ದು..? ಐಟಿಯವರು ಹಿಡೀಲಿಲ್ಲವಾ.. ಡಾಕ್ಯುಮೆಂಟ್ ಹಿಡಕೊಂಡು ಬಂದಿದ್ದು ಅವ್ರು.. ಯಾರನ್ನು ಕೇಳ್ಲಿಲ್ಲ.. ಎಷ್ಟು ಕಡೆಯಲ್ಲಿ ಪೆಟ್ರೋಲ್ ಬಂಕ್ ಹಾಕಿಲ್ವಾ.. ಯಾರ ಹಣ? ಮತ್ತೆ ತೆರಕೊಂಡಿದ್ದು ಕೃಷ್ಣರಿಗಾ..? ಫ್ಯಾಮಿಲಿ ಉದ್ಧಾರ ಮಾಡಲಿಕ್ಕಾ..? ಅದು ಹೇಳಿ.. ಪರ್ಯಾಯ ಅಂದ್ರೆ ಎಂಥ ಗೊತ್ತುಂಟಾ ಇವ್ರಿಗೆ ..? ಹಣ ಮಾಡುವ ಸ್ಕೀಮ್ ಕೃಷ್ಣ ಮಠದಲ್ಲಿ..


ವ್ಯಕ್ತಿ: ಊರಿಗೆಂತಾ ಕೊಡೋಲ್ವಾ?
ಶಿರೂರು ಸ್ವಾಮಿ : (ಕೋಪದಿಂದ) ಊರಿಗೆಂತ ಕೊಟ್ಟಿದ್ದಾರೆ ಅಂತ ಗೊತ್ತಿಲ್ವಾ ನಿಮ್ಗೆ? ಕೃಷ್ಣ ಮಠದ ಅಭಿವೃದ್ಧಿ ಅಂತ ಹೇಳೋದು.. 10 ಕೋಟಿಯ ಪ್ರಾಜೆಕ್ಟ್ ತೋರಿಸೋದು. 4 ಕೋಟಿ ಖರ್ಚು ಮಾಡೋದು, 6 ಕೋಟಿ ಒಳಗೆ ಹಾಕೋದು. ಇಷ್ಟೆ ಅಲ್ವಾ ಇವ್ರ ಪ್ರಾಜೆಕ್ಟು.. ಇನ್ನೆಂಥಾ ಪ್ರಾಜೆಕ್ಟ್ ಇವ್ರದು.. ನೋಡುವಾ ನಾವು ಒಂದು ರೂಪಾಯಿ ಹಿಡ್ಕೊಂಡು ಹೋಗ್ಲಿ ಕೃಷ್ಣ ಮಠದಿಂದ.. ನಮ್ಮ ಪೂರಾ ಅಕೌಂಟ್ ಚೆಕ್ ಮಾಡಿ ನೋಡಿ.. ಒಂದು ರೂಪಾಯಿ ಹಿಡ್ಕೊಂಡು ಹೋಗಿದ್ದೀನಾ ನಾನು? ಎಲ್ಲ ಕೃಷ್ಣನಿಗೆ ಹಾಕಿ ಹೋಗಿದ್ದೀನಿ..

ಹೀಗೇ ನಿರರ್ಗಳವಾಗಿ ಚರ್ಚೆ ಮುಂದುವರಿಯುತ್ತೆ.. ಆದರೆ ವಿವಾದ ತಾರಕಕ್ಕೇರಿದ್ದ ಒಂದು ಸಂದರ್ಭದಲ್ಲಿ ಈ ವಿಡಿಯೋ ತನ್ನದಲ್ಲ ಎಂದು ಶಿರೂರು ಶ್ರೀಗಳು ಹೇಳಿಕೆ ಕೊಟ್ಟಿದ್ದರು.
ಇದನ್ನು ನಂಬೋದು ಬಿಡೋದು ಓದುಗರ ವಿವೇಚನೆಗೆ ಬಿಟ್ಟದ್ದು.

2 thoughts on ““ಪರ್ಯಾಯ ಅಂದ್ರೆ ಎಂತಾ ಗೊತ್ತಾ? ಕೃಷ್ಣ ಮಠದ ಹಣ ಮಾಡುವ ಸ್ಕೀಮ್” -ಶಿರೂರು ಸ್ವಾಮಿ

 • July 22, 2018 at 12:20 PM
  Permalink

  Thanks on уour marveloսs posting! I certainly enjoyed reading it, you c᧐uld be a grеat author.I
  wkll remember to bookmark your blog and will еventually come Ьɑck sometime soon. I want too encourage yoou
  to ᥙltimately continue your great job, have a nice daʏ!

  Reply
 • July 22, 2018 at 7:41 PM
  Permalink

  Swamiji ee reethi madidare common Man go swamigu vyatyas iralla, yella hagaran horage barali

  Reply

Leave a Reply

Your email address will not be published.

Social Media Auto Publish Powered By : XYZScripts.com