ಮೋದಿ ಭಾಷಣ ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ ನೋಡಿದಂತೆ : ಟಿಡಿಪಿ ಸಂಸದ ಕೇಸಿನೇನಿ

ನವ ದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ಅತ್ಯುತ್ತಮ ನಟ, ಅಭಿನಯ ಚಕ್ರವರ್ತಿ, ಅವರ ಈ ಒಂದೂವರೆ ಕಾಲದ ಭಾಷಣ ಬಾಲಿವುಡ್ ಬ್ಲಾಕ್’ಬಸ್ಟರ್ ಸಿನಿಮಾ ನೋಡಿದಂತೆ  ಎಂದು ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ್ ರೆಡ್ಡಿಯವರು ಆರೋಪಿಸಿದರು.  ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡನೆ ಮಾಡಿದ್ದ ಅವಿಶ್ವಾಸ ನಿರ್ಣಯ ನಿನ್ನೆ ಲೋಕಸಭೆಯಲ್ಲಿ ಭಾರೀ ವಾಕ್ಸಮರಕ್ಕೆ ಕಾರಣವಾಗಿತ್ತು.
Image result for ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ್ ರೆಡ್ಡಿ
ಆಡಳಿತಾರೂಢ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಸೇರಿದಂತೆ ಇತರೆ ಘಟಾನುಘಟಿಗಳು ವಾಗ್ದಾಳಿ ನಡೆಸಿದ್ದವು. ನಂತರ 2 ಗಂಟೆಗಳ ಕಾಲ ಸುದೀರ್ಘವಾಗಿ ಮಾತನಾಡಿದ ಪ್ರಧಾನಿ ಮೋದಿಯವರು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು. ಮೋದಿ ಭಾಷಣದ ಬಳಿಕ ಎದ್ದು ನಿಂತ ಟಿಡಿಪಿ ಸಂಸದ ಶ್ರೀನಿವಾಸ್ ರೆಡ್ಡಿಯವರು, ಮೋದಿಯವರ ಹೇಳಿಕೆಗಳಿಗೆ ಉತ್ತರ ನೀಡಲು 30 ನಿಮಿಷಗಳ ಕಾಲಾವಕಾಶ ನೀಡುವಂತೆ ಸ್ಪೀಕರ್ ಬಳಿ ಮನವಿ ಮಾಡಿಕೊಂಡರು. ಇದಕ್ಕೆ ನಿರಾಕರಿಸಿದ ಸ್ಪೀಕರ್ ಕೇವಲ 5 ನಿಮಿಷ ನೀಡುವುದಾಗಿ ತಿಳಿಸಿ, ಮಾತನಾಡಲು ಆರಂಭಿಸುವಂತೆ ತಿಳಿಸಿದರು.
ಆದರೆ, ಇದಕ್ಕೆ ಒಪ್ಪದ ಶ್ರೀನಿವಾಸ್ ಅವರು 30 ನಿಮಿಷ ಬೇಕೆಂದು ಹೇಳಿದರು. ಮಾತಿನ ಚಕಮಕಿ ಬಳಿಕ ಸ್ಪೀಕರ್ ಅವರ ಸೂಚನೆಯಂತೆಯೇ 5 ನಿಮಿಷಗಳ ಕಾಲ ಮಾತನಾಡಲು ಒಪ್ಪಿದ ಶ್ರೀನಿವಾಸ್ ಅವರು, ಪ್ರಧಾನಿ ಮೋದಿ ವಿಶ್ವದ ಅತ್ಯುತ್ತಮ ನಟ. ಅಭಿನಯ ಚಕ್ರವರ್ತಿ. ಅವರ ಈ ಒಂದೂವರೆ ಕಾಲದ ಭಾಷಣ ಬಾಲಿವುಡ್ ಬ್ಲಾಕ್’ಬಸ್ಟರ್ ಸಿನಿಮಾ ನೋಡಿದಂತಾಯಿತು. ಮೋದಿಯವರ ಈ ಭಾಷಣಗಳಿಂದ ನಾವು ಕೂಡ ಮೋಸ ಹೋಗಿದ್ದೇವೆಂದು ಎಂದು ಹೇಳಿಕೊಂಡಿದ್ದಾರೆ.
 Image result for modi
ವಿರೋಧ ಪಕ್ಷಗಳ ಬೇಡಿಕೆಯಂತೆ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಈ ವೇಳೆ ಸದನದಲ್ಲಿ 451 ಸದಸ್ಯರು ಹಾಜರಿದ್ದರು. ವಿಪಕ್ಷಗಳ ನಿರ್ಣಯದ ವಿರುದ್ಧ 325 ಮತಗಳು ಚಲಾವಣೆಯಾಯಿತು. ನಿರ್ಣಯದ ಪರ ಕೇವಲ 126 ಮತ ಚಲಾವಣೆಯಾಗಿದ್ದು, ಈ ಮೂಲಕ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com