ಖರ್ಗೆ ರಾಜ್ಯದ ವಿಭಿನ್ನ ನಾಯಕ ಅವರು ಸಿಎಂ ಆಗಬೇಕಿತ್ತು : ಡಿಸಿಎಂ ಪರಮೇಶ್ವರ ಹೇಳಿಕೆ

ಬೆಂಗಳೂರು : ರಾಜಕೀಯ ರಂಗದಲ್ಲಿ ಸೋಲಿಲ್ಲದ ಸರದಾರ ಎಂದು ಹೆಸರು ಪಡೆದಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕಿತ್ತು, ಅವರಿಗೆ ಸಿಎಂ ಸ್ಥಾನ ದೊರಕದೆ ಇರುವುದು ಬೇಸರದ ಸಂಗತಿ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ 77ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಿಯತಕಾಲಿಕೆಯೊಂದು ಹೊರತಂದಿರುವ ವಿಶೇಷ ಸಂಚಿಕೆಯನ್ನು ಪ್ರೆಸ್‌ಕ್ಲಬ್‌ ಸಭಾಂಗಣದಲ್ಲಿ ಬಿಡುಗಡೆ ಮಾಡಿ ಡಿಸಿಎಂ ಮಾತನಾಡಿದ ಪರಮೇಶ್ವರ  ”ಖರ್ಗೆ ಅವರು ರಾಜ್ಯದ ವಿಭಿನ್ನ ನಾಯಕ. ನಾನು ಅವರನ್ನು ದಲಿತ ನಾಯಕ ಎನ್ನುವುದಿಲ್ಲ. ಎಲ್ಲ ಸಮುದಾಯಕ್ಕೂ ಸಮಾನ ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ನೊಂದ ಸಮುದಾಯಕ್ಕೆ ಹೆಚ್ಚು ಆಪ್ತವಾಗಿ ನಿಂತವರು.  ಇವರ ಇಡೀ ಸರ್ವಸ್ವವನ್ನು ಸಾರ್ವಜನಿಕರ ಬದುಕಿಗೋಸ್ಕರ ಮೀಸಲಿಟ್ಟವರು,” ಎಂದು ತಿಳಿಸಿದ್ದಾರೆ.

ಸಂಬಂಧಿತ ಚಿತ್ರ
”ಒಂಬತ್ತು ಬಾರಿ ವಿಧಾನಸಭೆಗೆ ಮತ್ತು ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿ ದಾಖಲೆ ಬರೆದಿರುವ ಮಲ್ಲಿಕಾರ್ಜುನ ಖರ್ಗೆ, ಅಂಬೇಡ್ಕರ್‌ ಹಾಕಿಕೊಟ್ಟ ದಾರಿಯಲ್ಲೆ ಸಾಗಿದ್ದಾರೆ. ಹಲವು ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇಷ್ಟೆಲ್ಲ ಅನುಭವ ಇದ್ದರೂ, ಈ ರಾಜ್ಯ ಅವರ ಸೇವೆಯಿಂದ ವಂಚಿತಗೊಂಡಿದೆ. ಸಾಮಾಜಿಕ ನ್ಯಾಯ ಕೊಡುವ ದೃಷ್ಟಿ ಇಟ್ಟಿರುವ ವ್ಯಕ್ತಿ ಆಗದೇ ಇದ್ದುದು ತುಂಬಾ ಬೇಸರದ ಸಂಗತಿ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.