ಮುಂಬೈ : ಮಗನಿಗಾಗಿ ಬರೆದ ಸೋನಾಲಿ ಬೇಂದ್ರೆಯ ‘ಮಮತೆಯ ಪತ್ರ’ ವೈರೆಲ್..!

ಮಂಬೈ :  ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ನಟಿ ಸೊನಾಲಿ ಬೇಂದ್ರೆ ತಮ್ಮ 12 ವರ್ಷದ ಮಗನಿಗೆ ಬರೆದಿರುವ ಪತ್ರ ವೈರಲ್ ಆಗಿದೆ. ತಮ್ಮ ಮಗನಿಗೆ ಭಾವಪೂರ್ಣ ಪತ್ರ ಬರೆದಿರುವ ಅವರು, ತಮ್ಮ ಮಗನ ಮುಗ್ಧ ಪ್ರೀತಿಯಿಂದಾಗಿ ಪ್ರಕಾಶಮಾನವಾದ ಸೂರ್ಯನ ಕಿರಣಗಳು ಬದುಕಿನಲ್ಲಿ ಹೊಳೆಯುವಂತೆ ಕಾಣುತ್ತಿದೆ ಎಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ 12 ವರ್ಷದ ಪುತ್ರ ರಣವೀರ್ ಗೆ ಹೃದಯಪೂರ್ವಕ ಅಕ್ಷರಗಳಿಂದ ಪತ್ರ ಬರೆದಿದ್ದಾರೆ ಸೊನಾಲಿ.

ಪತ್ರದ ಜೊತೆಗೆ ತಮ್ಮ ಮಗನನ್ನು ಆಲಂಗಿಸಿಕೊಂಡಿರುವ ಫೋಟೋವನ್ನು ಸಹ ಸೊನಾಲಿ ಬೇಂದ್ರೆ ಅಪ್ ಲೋಡ್ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ತಮಗೆ ಹೈಗ್ರೇಡ್ ಕ್ಯಾನ್ಸರ್ ಇದೆ ಎಂದು ಇನ್ಸ್ಟಾಗ್ರಾಮ್ ಮೂಲಕವೇ ಸೊನಾಲಿ ಬೇಂದ್ರೆ ಬಹಿರಂಗಪಡಿಸಿದ್ದರು.

”12 ವರ್ಷ 11 ತಿಂಗಳು, 8 ದಿನಗಳ ಹಿಂದೆ, ನನ್ನ ಮಗ ಜನಿಸಿದ ದಿನದಿಂದ ಅವನು ನನ್ನ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ. ಅಂದಿನಿಂದ ಅವನ ಸಂತೋಷ ಮತ್ತು ಸುಖವೇ ನನಗೆ ಮತ್ತು ನನ್ನ ಪತಿ ಗೋಲ್ಡಿ ಬೆಲ್ ಗೆ ಮುಖ್ಯವಾಗಿತ್ತು. ಆದರೆ ನನಗೆ ಯಾವಾಗ ಜೀವಕ್ಕೆ ಆಪತ್ತು ಬರುವ ಖಾಯಿಲೆ ಇದೆ ಎಂದು ಗೊತ್ತಾಯಿತೋ ಅದನ್ನು ನಮ್ಮ ಮಗನಿಗೆ ಹೇಗೆ ಹೇಳುವುದು, ಅವನಿಗೆ ಹೇಗೆ ಅರ್ಥ ಮಾಡಿಸುವುದು ಎಂಬ ಗೊಂದಲ, ಸಂಕಟದಲ್ಲಿ ನಾವಿದ್ದೆವು” ಎಂದು ತಮ್ಮ ಭಾವನೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

“ಇದೀಗ ಸರಿಯಾದ ಸಮಯ ಬಂದಿದೆ, ಈ ಸಮಯವನ್ನು ಮಗ ರಣವೀರ್ ಜೊತೆಗೆ ಕಳೆಯುತ್ತಿದ್ದೇನೆ. ಆತನಿಗೆ ಈಗ ಬೇಸಿಗೆ ರಜೆ. ಆತನ ಮುಗ್ಧ ಮಾತು, ಆಟ, ಹುಚ್ಚುತನ, ವರ್ತನೆ ಪ್ರಕಾಶಮಾನವಾದ ಸೂರ್ಯನ ಕಿರಣಗಳಂತೆ ನನ್ನ ಬಾಳಲ್ಲಿ ಪ್ರಜ್ವಲಿಸಲು ಸಹಾಯ ಮಾಡುತ್ತಿದೆ. ಇಂದು ನಾವಿಬ್ಬರೂ ಒಬ್ಬರಿಗೊಬ್ಬರು ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ’ ಎಂದು ಬರೆದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com