ಮತ್ತೆ ನಾಗರಹಾವು ಅಬ್ಬರ : ಸಿನಿಮಾ ನೋಡಲು ಥಿಯೇಟರ್​ಗಳ ಮುಂದೆ ಅಭಿಮಾನಿಗಳ ದಂಡು

ಬೆಂಗಳೂರು :  

Image result for nagarahavu today release
ಹೈ ಟೆಕ್ನಾಲಜಿ , 7.1 ಡಿಜಿಟಲ್ ಸೌಂಡ್​​​​​​​​​​​​​​​​​​​​​ನಲ್ಲಿ ತಯಾರಾಗಿರುವ ಸಿನಿಮಾ ನಾಗರಹಾವು, ಇಂದು ಸುಮಾರು 150 ಥಿಯೇಟರ್​​ಗಳಲ್ಲಿ ರಿಲೀಸ್ ಆಗಿದೆ. ಕೆ.ಜಿ ರಸ್ತೆಯಲ್ಲಿರೋ ನರ್ತಕಿ ಚಿತ್ರಮಂದಿರದ ಬಳಿಯಂತೂ ಅಭಿಮಾನಿಗಳ ಜನಸ್ತೋಮವೇ ನೆರೆದಿದ್ದು, ವಿಷ್ಣು ಅಭಿಮಾನಿಗಳು ಕುಟುಂಬ, ಸ್ನೇಹಿತರೊಂದಿಗೆ ಬಂದು ಥಿಯೇಟರ್ ಬಳಿ ಕಾದು ನಿಂತಿದ್ದಾರೆ. ಥಿಯೇಟರ್​​​​​​​​​​ಗಳನ್ನು ಡೆಕೋರೇಟ್ ಮಾಡಿ ವಿಷ್ಣು ಕಟೌಟ್​​​​​​​​​ಗೆ ದೊಡ್ಡ ಹೂವಿನ ಹಾರ ಹಾಕಿದ್ದಾರೆ.
Image result for nagarahavu today release
ಕನ್ನಡ ಚಿತ್ರರಂಗದ ಮಾಸ್ಟರ್‌ಪೀಸ್‌  ನಟಿಸಿರುವ ಚಿತ್ರ ಇದೀಗ ಸಿನಿಮಾಸ್ಕೋಪ್‌ ರೂಪದಲ್ಲಿ ಮತ್ತೆ ರಿಲೀಸ್‌ ಆಗುತ್ತಿದೆ.  ವಿಷ್ಣುವರ್ಧನ್‌ ಮತ್ತು ಅಂಬರೀಷ್‌ ಅವರಿಗೆ ಚಿತ್ರರಂಗದಲ್ಲಿ ಬಂಗಾರದ ಭವಿಷ್ಯ ಬರೆದ ಚಿತ್ರ. ಪುಟ್ಟಣ್ಣ ಕಣಗಾಲ್‌ ನಿರ್ದೇಶನದಲ್ಲಿ 1972ರಲ್ಲಿ ನಿರ್ಮಾಣವಾದ ಬಿಗ್‌ ಬಜೆಟ್‌ ಸಿನಿಮಾ ಇದು. ಈಗ ಮತ್ತೆ ತೆರೆಯ ಮೇಲೆ ಅಬ್ಬರಿಸುತ್ತಿದೆ. ಚಿತ್ರ ನಿರ್ಮಾಣ ಮಾಡಿದ್ದ ನಿರ್ಮಾಪಕ ವೀರಾಸ್ವಾಮಿ ಪುತ್ರ ನಟ ಬಾಲಾಜಿ ಚಿತ್ರವನ್ನು ಸಿನಿಮಾಸ್ಕೋಪ್‌ಗೆ ಬದಲಾಯಿಸಿದ್ದಾರೆ. ಕಾರ್ತಿಕ್‌ ಗೌಡ ಹೊಂಬಾಳೆ ಫಿಲ್ಮ್ಸ್ ವತಿಯಿಂದ ರಾಜ್ಯಾದ್ಯಂತ ವಿತರಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com