ಮೈಸೂರು : ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿ ದರ್ಶನ ಪಡೆದ ದಚ್ಚು..

ಮೈಸೂರು:  ಪ್ರತಿ ವರ್ಷ ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ದಾಸ ಭೇಟಿ ನೀಡುತ್ತಾರೆ. ಅದೇ ರೀತಿ ಈ ವರ್ಷವೂ ಕೂಡ ತಮ್ಮ ಸ್ನೇಹಿತರೊಂದಿಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ಇತ್ತ ಬೆಟ್ಟಕ್ಕೆ ದರ್ಶನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ.

Image result for chamundi

ದರ್ಶನ್ ಕಂಡು ಪುಳಕಿತರಾದ ಯುವಸಮೂಹ, ಅಭಿಮಾನಿಗಳನ್ನ ನಿಯಂತ್ರಿಸುವಾಗ ನೂಕುನುಗ್ಗಲು ಏರ್ಪಟ್ಟಿದ್ದು, ಪೊಲೀಸರು ದರ್ಶನ್ ಅವರನ್ನು ಒಳ ಬಿಡಲು ಹರಸಾಹಸ ಪಟ್ಟಿದ್ದಾರೆ. ಬಳಿಕ ದರ್ಶನ್ ಹರಸಾಹಸ ಪಟ್ಟು ದೇವಾಲಯವನ್ನು ಪ್ರವೇಶಿಸಿದ್ದು, ಕೊನೆಗೂ ಚಾಮುಂಡಿ ತಾಯಿಯ ದರ್ಶನ ಪಡೆದು ದಚ್ಚು ವಾಪಸ್ಸಾಗಿದ್ದಾರೆ. ಈ ವೇಳೆ ದರ್ಶನ್ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದರು.

ಆಷಾಢ ಮಾಸ, ಈ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನ ನಡೆಸೋದಿಲ್ಲ. ಆದ್ರೆ ಇದೇ ಮಾಸದಲ್ಲಿ ದೇವರ ಆರಾಧನೆಯಿಂದ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಅನ್ನೋದು ಆಸ್ತಿಕರ ನಂಬಿಕೆ. ಅದರಲ್ಲೂ ಆಷಾಢ ಮಾಸದಲ್ಲಿ ಶಕ್ತಿದೇವತೆಗಳ ಆರಾಧನೆಯಿಂದ ಕುಟುಂಬ ಸದಸ್ಯರ ಆರೋಗ್ಯ, ಐಶ್ವರ್ಯ ಸಂಪತ್ತು ಅಭಿವೃದ್ದಿಯಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಈ ನಂಬಿಕೆಯಿಂದಲೇ ನೂರಾರು ವರ್ಷಗಳಿಂದ ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸುತ್ತಾ ಬರಲಾಗಿದೆ  ಎನ್ನಲಾಗಿದೆ.

Leave a Reply

Your email address will not be published.