ಶಿರೂರು ಶ್ರೀ ಸಾವಿನ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದ ಕೊಡಮಣಿತ್ತಾಯ ದೈವ..!

ಶೀರೂರು ಶ್ರೀಗಳ ಅಸಹಜ ಸಾವಿನ ಬಗ್ಗೆ ಮೊದಲೇ ಧರ್ಮದೈವ ಕೊಡಮಣಿತ್ತಾಯ ದೈವ ಭವಿಷ್ಯ ನುಡಿದಿತ್ತು ಎಂಬ ಸುದ್ದಿ ಇದೀಗ ಮಹತ್ವ ಪಡೆದುಕೊಂಡಿದೆ. ಪಡುಬಿದ್ರೆ ಬಾಲು ಪೂಜಾರಿ ಮನೆತನದಲ್ಲಿ ನಡೆದ ಧರ್ಮನೇಮದ ಸಂದರ್ಭದಲ್ಲಿ ಕೊಡಮಣಿತ್ತಾಯ ದೈವ ಶೀರೂರು ಶ್ರೀಗಳಿಗೆ ಅಪಾಯ ಇದೆ ಎಂದಿತ್ತು.

ಈ ವೇಳೆ ಸ್ವತಃ ಶೀರೂರು ಶ್ರೀಗಳ ಮುಂದೆಯೇ ನಿಂತು ದೈವ ನುಡಿದಿತ್ತು. ಎರಡು ತಿಂಗಳ ಹಿಂದೆ ನಡೆದಿದ್ದ ಧರ್ಮನೇಮದ ವೇಳೆ ಕೊಡಮಣಿತ್ತಾಯ ದೈವ ಭವಿಷ್ಯ ನುಡಿದಿತ್ತು. ನಿಮಗೆ ಅಪಾಯ ಇದೆ ಅಂತ ಕೊಡಮಣಿತ್ತಾಯ ದೈವ ಶೀರೂರು ಶ್ರೀಗಳ ಮುಂದೆ ನಿಂತು ನುಡಿ‌ ಹೇಳಿತ್ತು. ದೈವದ ಈ ನುಡಿ ಬಗ್ಗೆ ಶ್ರೀಗಳು ಯಾವುದೇ ಗಮನ ಹರಿಸಿರಲಿಲ್ಲ

Leave a Reply

Your email address will not be published.

Social Media Auto Publish Powered By : XYZScripts.com