ಕರಣ್ ಜೋಹರ್ ನಿರ್ಮಾಣದ ‘ಧಡಕ್’ ಚಿತ್ರ ರಿಲೀಸ್ : ಬಾಲಿವುಡ್‍ಗೆ ಜಾಹ್ನವಿ, ಇಶಾನ್ ಎಂಟ್ರಿ

ಖ್ಯಾತ ಹಿಂದಿ ಚಿತ್ರ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರ ಒಡೆತನದ ಧರ್ಮ ಪ್ರೊಡಕ್ಷನ್ ಹಾಗೂ ಜೀ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ‘ಧಡಕ್’ ಚಿತ್ರ  ಶುಕ್ರವಾರ ಬಿಡುಗಡೆಗೊಂಡಿದೆ. ದಿವಂಗತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ‘ಧಡಕ್’ ಸಿನೆಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನಟ ಶಾಹಿದ್ ಕಪೂರ್ ಸೋದರ ಇಶಾನ್ ಖಟ್ಟರ್ ಕೂಡ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

Image result for dhadak

Image result for dhadak

ಮರಾಠಿ ಭಾಷೆಯಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ಸೈರಾಟ್’ ಚಿತ್ರದ ಕಥೆಯನ್ನು ‘ಧಡಕ್’ ಒಳಗೊಂಡಿದ್ದು, ಶಶಾಂಕ್ ಖೇತಾನ್ ನಿರ್ದೇಶನ ಮಾಡಿದ್ದಾರೆ. ಇಶಾನ್ ಖಟ್ಟರ್ ಮತ್ತು ಜಾಹ್ನವಿ ಕಪೂರ್ ನಾಯಕ ಹಾಗೂ ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದು, ಯುವಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com