ಮೈಸೂರು : ಸಿಎಂಗೆ ಕಪ್ಪುಬಾವುಟ ಪ್ರದರ್ಶನ : ದಲಿತ ಸಂಘಟನೆಗಳಿಂದ ಕಾರು ಘೇರಾವಿಗೆ ಯತ್ನ

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮೈಸೂರಿನಲ್ಲಿ ಕಪ್ಪುಬಾವುಟ ಪ್ರದರ್ಶನ ಮಾಡಲಾಗಿದೆ. ದಲಿತ ಸಂಘಟನೆಗಳಿಂದ ಸಿಎಂ‌ ಕಾರು ಘೇರಾವಿಗೆ ಯತ್ನ ನಡೆಸಲಾಗಿದೆ. ರಾಷ್ರ್ಟಪತಿಗಳ ಅಂಕಿತವಿದ್ದರೂ ಎಸ್ಸಿ ಎಸ್ಟಿ ನೌಕರರಿಗೆ ಮುಂಬಡ್ತಿ ನೀಡದಿರುವ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.

ಶೀಘ್ರವಾಗಿ ಎಸ್ಸಿ ಎಸ್ಟಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯ ಪಡಿಸಲಾಗಿದೆ. ಸಿಎಂಗೆ ಕಪ್ಪುಬಾವುಟ ಪ್ರದರ್ಶನ‌ ಮಾಡದಂತೆ ಪೊಲೀಸರು ತಡೆಯೊಡ್ಡಿದರೂ, ಪೊಲೀಸರನ್ನ‌ ಲೆಕ್ಕಿಸದೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ದಲಿತ ಸಂಘಟನೆಗಳ ಮುಖಂಡರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com