ಬೀದರ :ರೈತರ ಸರಣಿ ಆತ್ಮಹತ್ಯೆ, ಸಾಲಬಾಧೆ ತಾಳದೇ ಮತ್ತೋಬ್ಬ ಅನ್ನದಾತ ನೇಣಿಗೆ ಶರಣು

ಬೀದರ್ : ನಾನು ಸಿಎಂ ಆದ್ರೆ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇನೆ, ರೈತರಿಗೆ ನನ್ನ ಮೊದಲ ಅಧ್ಯತೆ ಎಂದ ಕುಮಾರಸ್ವಾಮಿ ಸಿಎಂ ಆದ್ರು ರೈತರ ಆತ್ಮಹತ್ಯೆ ಕಡಿಮೆಯಾಗಲಿಲ್ಲ. ಹೌದು ಬೀದರನಲ್ಲಿ ರೈತರು ಸಾಲಭಾದೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಬೀದರನಲ್ಲಿ  ರೈತರ ಸರಣಿ ಆತ್ಮಹತ್ಯೆ ಮುಂದುವರೆದಿದ್ದು. ಸಾಲಬಾಧೆ ತಾಳಲಾರದೆ ಬಸವ ಕಲ್ಯಾಣ ತಾಲೂಕು ಹಳ್ಳಿ ಗ್ರಾಮದ ಮತ್ತೋಬ್ಬ ರೈತ ಬಾಲಾಜಿ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಗತಿ ಕೃಷ್ಣಾ, ಹಾಗೂ ಖಾಸಗಿಯಾಗಿ ಸಾಕಷ್ಟು ಸಾಲಮಾಡಿಕೊಂಡಿದ್ದ ಈ ಕಾರಣ ಸಾಲ ತಿರಿಸಲಾಗದೇ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.  

ಸಾಲಮನ್ನಾ ನಂತರ ಜಿಲ್ಲೆಯಲ್ಲಿ ಒಟ್ಟು ನಾಲ್ಕು ರೈತರು ಸೂಸೈಡ್ ಮಾಡಿಕೊಂಡಿದ್ದು. ಔರಾದ್ ತಾಲೂಕಿನ ಖಾಶೆಂಪೂರ್ ಗ್ರಾಮದ ರಾಮನಾಥ್ ಶೆಟ್ಟಿ ಮೇಕರೆ, ಬಸವ ಕಲ್ಯಾಣದ ನಿಡುಗೊಡಿ ಗ್ರಾಮದ ಭಿಮಣ್ಣ ಕಾಳೆಖಂಡು, ಮತ್ತೊಬ್ಬ ಬಸವಕಲ್ಯಾಣದ ಹಣಮಂತವಾಡಿ ರೈತ ಮಲ್ಲಪ್ಪ ಮದಪೆ, ಆತ್ಮಹತ್ಯೆ ಮಾಡಿಕೊಂಡ ಅನ್ನದಾತರು.

ಇನ್ನೂ, ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಇದುವರೆಗೂ ಯಾವುದೇ ಜನಪ್ರತಿನಿಧಿ, ಅಧಿಕಾರಿಗಳು ಭೇಟಿ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ.

 

Leave a Reply

Your email address will not be published.