ಬಿಜೆಪಿ ಭ್ರಷ್ಟಚಾರಿಗಳನ್ನುರಕ್ಷಿಸುತ್ತಿದ್ದೆ : ಮೋದಿ ವಿರುದ್ಧ ಗುಡುಗಿದ ಡಿಟಿಪಿ ಸಂಸದ ಗಲ್ಲಾ ಜಯದೇವ

ನವದೆಹಲಿ :  ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸುಳ್ಳು ಭರವಸೆಗಳನ್ನು ನೀಡಿ ಆಂಧ್ರ ಪ್ರದೇಶಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಟಿಡಿಪಿ ಸಂಸದ ಗಲ್ಲಾ ಜಯದೇವ್ ಗುಡುಗಿದ್ದಾರೆ.
ಸಂಸತ್ ಕಲಾಪದಲ್ಲಿ ಅವಿಶ್ವಾಸ ನಿರ್ಣಯದ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಟಿಡಿಪಿ ಸಂಸದ ಗಲ್ಲಾ ಜಯದೇವ್ ಅವರು, ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಆಂಧ್ರ ಪ್ರದೇಶ ಹಳೆಯ ಹೆಸರಾದರೂ ಅದು ಹೊಸ ರಾಜ್ಯ, ತೆಲಂಗಾಣ ಹೊಸ ಹೆಸರಾದರೂ ಅದು ಹಳೆಯ ರಾಜ್ಯ. ಇದು ಕೇಂದ್ರ ಸರ್ಕಾರಕ್ಕೆ ತಿಳಿದಿದ್ದರೂ ಆರ್ಥಿಕವಾಗಿ ತೆಲಂಗಾಣಕ್ಕೆ ಬೆಂಬಲ ನೀಡಿದೆ. ಮೋದಿ ಸರ್ಕಾರ 2014ರ ಚುನಾವಣೆ ವೇಳೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು. ಆದರೆ ಎನ್ ಡಿಎ ಸರ್ಕಾರ ರಚನೆಯಾಗಿ 4 ವರ್ಷಗಳೇ ಕಳೆದರೂ ಈ ವರೆಗೂ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ, ಇದು ಬಿಜೆಪಿ ಮತ್ತು ಟಿಡಿಪಿ ನಡುವಿನ ಹೋರಾಟವಲ್ಲ. ಆಂಧ್ರದ ಜನರು ಮತ್ತು ಕೇಂದ್ರ ನಡುವಿನ ‘ಧರ್ಮಯುದ್ಧ’  ಎಂದು ಹೇಳಿದರು.
Related image
ಪ್ರಧಾನಿ ಅವರು ಸೀಮಾಂಧ್ರವನ್ನು ‘ಸ್ಕ್ಯಾಮ್‌ ಆಂಧ್ರ’ ಎಂದು ಟೀಕಿಸಿದ್ದರು. ಆದರೆ, ಬಿಜೆಪಿ ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತಿದೆ. ಕರ್ನಾಟಕದಲ್ಲಿ ಹಲವು ದೂರುಗಳಿರುವ ಜನಾರ್ಧನ ರೆಡ್ಡಿ ಅವರನ್ನು ರಕ್ಷಿಸುತ್ತಿದ್ದೀರಿ ಎಂದ ಜಯದೇವ ಗಲ್ಲಾ ಅವರು ಸರ್ಕಾರ ಕೆಲವರ ಹಿತಕ್ಕಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.  2016ರಲ್ಲಿ ಆಂಧ್ರಕ್ಕೆ ವಿಶೇಷ ಪ್ಯಾಕೇಜ್‌ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ನಾವಿನ್ನೂ ಭರವಸೆ ಈಡೇರಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ನಾವು ಕೇಂದ್ರ ಸರ್ಕಾರ, ಪ್ರಧಾನಿಗೆ ‘ಬೆದರಿಕೆ’ ಹಾಕುತ್ತಿಲ್ಲ. ‘ಶಾಪ’ ನೀಡುತ್ತಿದ್ದೇವೆ.
Related image
ಇದು ಪ್ರಜಾಪ್ರಭುತ್ವ ಮತ್ತು ಸರ್ಕಾರದ ನಡುವಿನ ಹೋರಾಟ ಎಂದು ಹೇಳಿದರು. ಸರ್ಧಾರ್‌ ವಲ್ಲಬಾಭಾಯಿ ಪಟೇಲ್‌ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ನೂರಾರು ಕೋಟಿ ಅನುದಾನ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ, ಆಂಧ್ರದ ರಾಜಧಾನಿಗೆ ಯಾವ ಯೋಜನೆಯನ್ನೂ ನೀಡುತ್ತಿಲ್ಲ ಎಂದು ದೂರಿದರು. ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ನೀಡಿದ್ದ ಸಮಯ ಮೀರಿ ಜಯದೇವ್‌ ಗಲ್ಲಾ ಅವರು ನಿರ್ಣಯ ಮಂಡನೆಯನ್ನು ಮುಂದುವರಿಸಿದ್ದರಿಂದ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಆಗ, ಮಂಡನೆ ಮುಗಿಸುವಂತೆ ಸ್ಪೀಕರ್‌ ಸೂಚಸಿದರು. ಟಿಡಿಪಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೀಡಿರುವ ಹೇಳಿಕೆಗಳನ್ನು ಹಿಂಪಡೆಯಬೇಕು ಎಂದು ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್‌ ಆಗ್ರಹಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com