ಶ್ರೀಯವರ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ : ಉಡುಪಿಯನ್ನು ಆವರಿಸಿದ ನೀರವ ಮೌನ

ಉಡುಪಿ : ಶಿರೂರು ಶ್ರೀಗಳ ಅಂತ್ಯಸಂಸ್ಕಾರದ ಕುರಿತು ಸೋದೆ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದು ಶ್ರೀಗಳ ಮೃತದೇಹವನ್ನು ಎಂ ಸಿ ಆಸ್ಪತ್ರೆಯಿಂದ ರಥಬೀದಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎನ್ನಲಾಗಿದೆ. ಶಿರೂರು ಶ್ರೀಗಳು 1979-80, 1994-96, 2010-11 ಈ ವರ್ಷಗಳಲ್ಲಿ ಪರ್ಯಾಯ ಪಟ್ಟ ಸ್ವೀಕರಿಸಿದ್ದರು.

ಉಡುಪಿ ವಿಶ್ವೋತ್ತಮ ತೀರ್ಥರು ಸೋದೆ ಮಠದ ಹಿರಿಯ ಶ್ರೀಗಳು ಶಿರೂರು ಶ್ರೀಗಳಿಗೆ ಸನ್ಯಾಸ ದೀಕ್ಷೆ ನೀಡಿದ್ದರು. ಸೋದೆ ಮಠ ಶೀರೂರು ಮಠದ ದ್ವಂದ್ವ ಮಠ. ಎರಡೆರಡು ಮಠಗಳನ್ನು ದ್ವಂದ್ವ ಮಠ ಎನ್ನಲಾಗುತ್ತದೆ. ದ್ವಂದ್ವ ಮಠದವರು ಮುಂದಿನ ಎಲ್ಲ ತೀರ್ಮಾನ ಮಾಡಲಿದ್ದು, ಸೋದೆ ವಿಶ್ವವಲ್ಲಭ ತೀರ್ಥರು ಶೀರೂರು ಮಠಕ್ಕೆ ಜವಾಬ್ದಾರರಾಗಿರುತ್ತಾರೆ.

ಉಡುಪಿ ಮಠದ ಸಂಪ್ರದಾಯದಂತೆ ಶ್ರೀಗಳ ಪಾರ್ಥಿವ ಶರೀರವನ್ನು ಮಠಕ್ಕೆ ಕೊಂಡೊಯ್ದು ದೇವರ ದರ್ಶನ ಮಾಡಿಸಲಾಗುತ್ತದೆ. ಬಳಿಕ ಅವರ ಪೂಜಾ ಸಾಮಾಗ್ರಿಗಳನ್ನು ಅವರ ಪಾರ್ಥಿವ ಶರೀರದ ಜೊತೆ ಇರಿಸಿ ಬೃಂದಾವನ ನಿರ್ಮಿಸಿ ಅದರಲ್ಲಿ ಉಪ್ಪು, ಹತ್ತಿ, ಕಾಳುಮೆಣಸು, ಕರ್ಪೂರಗಳನ್ನು ತುಂಬಿಸಿ, ಸಾಂಪ್ರದಾಯಿಕ ಬುಟ್ಟಿಯಲ್ಲಿ ಭಕ್ತರು ಹತ್ತಿಯನ್ನು ಹಾಕುತ್ತಿದ್ದಾರೆ. ಪಾರ್ಥಿವ ಶರೀರವನ್ನು ಅದರಲ್ಲಿರಿಸಿ ಭಕ್ತರು ಹೊತ್ತು ಅಂತಿಮ ಸಂಸ್ಕಾರ ನೆರವೇರಿಸಲಿದ್ದಾರೆ.

ಶ್ರೀಗಳ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದು, ಶ್ರೀಗಳ ರಕ್ತದಲ್ಲಿ ವಿಷಕಾರಿ ಅಂಶ ಕಂಡುಬಂದಿದ್ದು, ಇದು ಸಹಜ ಸಾವಲ್ಲವೆಂದು ಅನುಮಾನ ವ್ಯಕ್ತವಾಗಿ ತನಿಖೆ ಆರಂಭಗೊಂಡಿದೆ.

2 thoughts on “ಶ್ರೀಯವರ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ : ಉಡುಪಿಯನ್ನು ಆವರಿಸಿದ ನೀರವ ಮೌನ

Leave a Reply

Your email address will not be published.

Social Media Auto Publish Powered By : XYZScripts.com