ಶಿರೂರು ಶ್ರೀಗಳ ದೇಹದಲ್ಲಿ ವಿಷದ ಅಂಶ ಪತ್ತೆ..! : ವಿಷಪ್ರಾಶನ ಶಂಕೆ ವ್ಯಕ್ತಪಡಿಸಿದ ವೈದ್ಯಾಧಿಕಾರಿ..

ಉಡುಪಿಯ ಶಿರೂರು ಶ್ರೀಗಳು ಇದಕ್ಕಿದ್ದಂತೆ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಲಕ್ಷ್ಮೀವರ ಶ್ರೀಗಳ ಸಾವಿಗೆ ನಾಡಿನ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ‘ ಶಿರೂರು ಶ್ರೀಗಳ ಮೃತ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ, ಈ ಬಗ್ಗೆ ಪೋಲೀಸರಿಗೆ ಮಾಹಿತಿಯನ್ನು ನೀಡಿದ್ದೇವೆ ‘ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿ ಅವಿನಾಶ್ ಶೆಟ್ಟಿ ಹೇಳಿದ್ದಾರೆ.

ನಿನ್ನೆ, ಮೊನ್ನೆಯವರೆಗೆ ಆರೋಗ್ಯವಾಗಿ, ಗಟ್ಟಿಮುಟ್ಟಾಗಿ ಇದ್ದ ಶ್ರೀಗಳ ಹಠಾತ್ ಸಾವಿಗೆ ಕಾರಣವೇನು..? ಸ್ವಾಮೀಜಿಗಳ ಸಾವು ಸಹಜವೇ..? ಅಥವಾ ಅಸಹಜವೇ..? ಕೊಲೆ ನಡೆದಿರಬಹುದೇ..? ಎಂಬ ಹಲವು ಪ್ರಶ್ನೆ, ಅನುಮಾನಗಳ ಹುತ್ತ ಶ್ರೀಗಳ ಸಾವಿನ ಸುತ್ತ ರೂಪುಗೊಂಡಿದೆ. ಇದಕ್ಕೆ ವೈದ್ಯಾಧಿಕಾರಿ ಅವಿನಾಶ್ ಶೆಟ್ಟಿಯವರ ಹೇಳಿಕೆ ಕಾರಣವಾಗಿದೆ.

ಶಿರೂರು ಸ್ವಾಮಿಜಿ ಇತ್ತೀಚೆಗೆ ಉಡುಪಿ ಅಷ್ಟ ಮಠಗಳ ಕುರಿತು ಕೆಲವು ಆಘಾತಕಾರಿ ಅಂಶಗಳನ್ನು ಹೊರಹಾಕುವುದಾಗಿ ಹೇಳಿಕೊಂಡಿದ್ದರು. ‘ಉಡುಪಿ ಮಠದಲ್ಲಿರುವ ಅನೇಕ ಸ್ವಾಮಿಗಳಿಗೆ ಮಕ್ಕಳಿದ್ದಾರೆ. ಈ ಬಗ್ಗೆ ಡಿಎನ್ ಎ ಟೆಸ್ಟ್ ನಡೆಯಲಿ. ಉಡುಪಿ ಮಠದ ಒಳಗೆ ಸಂಬಂಧ ಪಟ್ಟ ಸ್ವಾಮಿಗಳ ಕುಟುಂಬ ವರ್ಗದವರೇ ತುಂಬಿಕೊಂಡಿದ್ದಾರೆ. ಹಣಕಾಸಿನ ಅವ್ಯವಹಾರ ಎದ್ದು ಕಾಣುತ್ತಿದೆ. ಎಲ್ಲದರ ಬಗ್ಗೆಯೂ ದಾಖಲೆ ಸಮೇತ ಬಯಲು ಗೊಳಿಸುತ್ತೇನೆ. ಮೇಲಿನ ಎಲ್ಲವೂ ಮಾಧ್ಯಮ ಗಳಲ್ಲಿ ಬಂದಿವೆ ‘ ಎಂದು ಶಿರೂರು ಸ್ವಾಮೀಜಿ ಹೇಳಿಕೆ ನೀಡಿದ್ದರು.

 

One thought on “ಶಿರೂರು ಶ್ರೀಗಳ ದೇಹದಲ್ಲಿ ವಿಷದ ಅಂಶ ಪತ್ತೆ..! : ವಿಷಪ್ರಾಶನ ಶಂಕೆ ವ್ಯಕ್ತಪಡಿಸಿದ ವೈದ್ಯಾಧಿಕಾರಿ..

Leave a Reply

Your email address will not be published.

Social Media Auto Publish Powered By : XYZScripts.com