ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಅಸ್ತು : ಸಚಿವೆ ಜಯಮಾಲಾ ಪ್ರತಿಕ್ರಿಯೆ..!

ಬೆಂಗಳೂರು : ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನಿಷೇಧ ಸರಿಯಲ್ಲ ಎಂಬ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಸಚಿವೆ ಜಯಮಾಲಾ, ಇದು ಐತಿಹಾಸಿಕ ತೀರ್ಮಾನ ಆಗುತ್ತೆ ಅನ್ನೋ ನಂಬಿಕೆ ಇದೆ. ದೇವರ ದೃಷ್ಟಿಯಲ್ಲಿ ನಾವೆಲ್ಲ ಮಕ್ಕಳೇ.ಯಾವುದೇ ಭಿನ್ನವಿಲ್ಲ ಎಂದು ತಿಳಿಸಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕುರಿತು ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಚಿವೆ ಜಯಮಾಲಾ, ಅಂಬೇಡ್ಕರ್ ಸಂವಿಧಾನ ರಚಿಸಿದಾಗ ಹೆಣ್ಣಿಗೋಂದು, ಗಂಡಿಗೊಂದು ದೇವಸ್ಥಾನ ಮಾಡಿಲ್ಲ. ಸಂವಿಧಾನ ಅಷ್ಟು ಗಟ್ಟಿಯಾಗಿದೆ. 1986-1991ರ ವರೆಗೆ ಶಬರಿಮಲೆಗೆ ಎಲ್ಲರೂ ಹೋಗ್ತಿದ್ದರು. ಆದ್ರೆ 1991 ರಲ್ಲಿ‌ ಒಂದು ಸಿಂಗಲ್ ಬೆಂಚ್ ತೀರ್ಪು ತಪ್ಪಾಗಿದೆ. ಕಾನೂನಿನ ಮೂಲಕ ಹೆಣ್ಣಿಗೆ ನ್ಯಾಯ ಸಿಗುತ್ತೆ. ದೇವಸ್ಥಾನದ ವಿಚಾರದಲ್ಲಿ ತಾರತಮ್ಯ ಸರಿಯಲ್ಲ ಎಂದು ಹೇಳಿದ್ದರು.

Image result for actor jayamala

ನಾನು ನಂಬಿದ ದೇವರು ಅಯ್ಯಪ್ಪ. ಆ ದೇವರ ಮೇಲೆ ಅಪಾರ ಗೌರವ, ಭಕ್ತಿ ನಂಬಿಕೆ ಇದೆ, ಸತ್ಯವಾದ ದೇವಸ್ಥಾನ ಅದು. ದೇವರ ದೃಷ್ಟಿಯಲ್ಲಿ ನಾವೆಲ್ಲ ಮಕ್ಕಳೇ. ಭಕ್ತ ಮತ್ತು ದೇವರ ನಡುವೆ ಯಾವುದೂ ಭಿನ್ನ ಇರೊಲ್ಲ. ನಂಬಿಕೆ ಅಷ್ಟೇ ಇದೆ ಎಂದು ಸಚಿವೆ ಜಯಮಾಲಾ ತಿಳಿಸಿದರು.

ಅಕ್ಕ ಸಮ್ಮೇಳನಕ್ಕೆ ಕಲಾವಿದರನ್ನು ಕಳುಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವೆ ಜಯಮಾಲಾ, 2009 ರಲ್ಲಿ ನಾನೂ ಹೋಗಿದ್ದೆ, ಭಾಗವಹಿಸಿದ್ದೆ. ನಂತರ ಏನಾಯ್ತು ಗೊತ್ತಿಲ್ಲ. ಕಳೆದ ಬಾರಿ ಏನಾಗಿದೆ ಗೊತ್ತಿಲ್ಲ. ಈ ಬಾರಿ ಕಳುಹಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಬೇಕು. ಆರ್ಥಿಕ ಪರಿಸ್ಥಿತಿ ಗಮನಿಸಬೇಕು. ಅಧಿಕಾರಿಗಳ ಜೊತೆಗೆ ಕೂಡ ಈ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದರು.

 

Leave a Reply

Your email address will not be published.

Social Media Auto Publish Powered By : XYZScripts.com