ದೇವಾಲಯಗಳಿಗೆ ಅರ್ಚಕರಾಗಿ 19 ದಲಿತರನ್ನು ನೇಮಿಸಲು TDB ನಿರ್ಧಾರ!

ಭಾರತೀಯ ಜಾತಿ ಪದ್ದತಿಯ ಇತಿಹಾಸದಲ್ಲಿ ಮೊದಲ ಬಾರಿಗೆ ದೇವಾಲಯಗಳಿಗೆ ಅರ್ಚಕರಾಗಿ ದಲಿತ ವ್ಯಕ್ತಿಯೊಬ್ಬರನ್ನು ನೇಮಿಸಲಾಗುತ್ತಿದೆ. ಕೇರಳದ ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಮೇಲ್ವಿಚಾರಣೆ, ಉಸ್ತುವಾರಿಯಲ್ಲಿ ನಡೆಯುತ್ತಿರುವ ದೇವಾಲಯವೊಂದಕ್ಕೆ ಪರಿಶಿಷ್ಟ ಪಂಗಡದ ವ್ಯಕ್ತಿ ಅರ್ಚಕರಾಗಿ ನೇಮಕವಾಗಲಿದ್ದಾರೆ.

TDB ಯೂ ಸ್ವಾಯತ್ತ ಸಂಸ್ಥೆಯಾಗಿದ್ದು, ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇರಿದಂತೆ ಕೇರಳದ ದಕ್ಷಿಣದಲ್ಲಿ 1,200 ದೇವಾಲಯಗಳನ್ನು ನಿರ್ವಹಿಸುತ್ತಿದೆ. ಈ ದೇವಾಲಯಗಳಲ್ಲಿ 18 ಪರಿಶಿಷ್ಟ ಜಾತಿ ಹಾಗೂ 1 ಪರಿಶಿಷ್ಟ ಪಂಗಡದ ಅರ್ಚಕರು ಸೇರಿ ಒಟ್ಟು 19 ಜನರನ್ನು ನೇಮಿಸಲು TDB ನಿರ್ಧರಿಸಿದೆ.

”TDB ಅಡಿಯಲ್ಲಿ ಬರುವ ದೇವಾಲಯದಲ್ಲಿ ಪರಿಶಿಷ್ಟ ಪಂಗಡದ ವ್ಯಕ್ತಿಯನ್ನು ಅರ್ಚಕನನ್ನಾಗಿ ನೇಮಕ ಮಾಡುತ್ತಿರುವುದು ಖಿಆಃ ಯ ಇತಿಹಾಸದಲ್ಲೇ ಮೊದಲು” ಎಂದು ರಾಜ್ಯ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅರ್ಚಕರನ್ನು ವಿಶೇಷ ನೇಮಕಾತಿ ಮೂಲಕ ನಿಯೋಜಿಸಲಾಗಿದೆ ಎಂದಿರುವ ಅವರು, 2017 ರಲ್ಲಿ ಪ್ರಕಟಿಸಲಾದ ರ್‍ಯಾಂಕ್ ಲಿಸ್ಟ್‌ನಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ ಅರೆ ಕಾಲಿಕ ಅರ್ಚಕರ ಹುದ್ದೆಗೆ ಇದುವರೆಗೆ 310 ಜನರು ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

“ಆ ಸಮಯದಲ್ಲಿ ಪರೀಕ್ಷೆಗೆ ಸಾಕಷ್ಟು ಅರ್ಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಇಲ್ಲದೇ ಇದ್ದುದರಿಂದ, ವಿಶೇಷ ಅಧಿಸೂಚನಗೆ ಅನುಗುಣವಾಗಿ ಈ ಪ್ರತ್ಯೇಕ ರ್‍ಯಾಂಕ್ ಲಿಸ್ಟ್‌ ಅನ್ನು ಸಿದ್ಧಪಡಿಸಲಾಗಿತ್ತು. ಇದನ್ನು ನವೆಂಬರ್ 5 ರಂದು ಪ್ರಕಟಿಸಲಾಗಿತ್ತು” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಲವ್ ಜಿಹಾದ್ ಕಾನೂನಿನ ಹಿಂದೆ ಕೋಮುದ್ವೇಷದ ರಾಜಕೀಯ ದುರುದ್ದೇಶವಿದೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights