ಚಿತ್ರದುರ್ಗ : ಸಾಮಿಲ್ ಮೇಲೆ ಅರಣ್ಯ ಇಲಾಖೆ ತಂಡದ ದಾಳಿ : ಕದ್ದು ಸಾಗಿಸಲಾದ ಸಂಪತ್ತು ವಶ

ಶಿರಸಿ : ಅರಣ್ಯ ಸಂಪತ್ತು ವಶ : ಚಿತ್ರದುರ್ಗ ಸಾಮಿಲ್ ನಲ್ಲಿ ದಾಳಿ ಮಾಡಿ ಉತ್ತಕ ಕನ್ನಡ ಜಿಲ್ಲೆಯ ಯಲ್ಲಾಪುರ ಅರಣ್ಯ ಇಲಾಖೆಯ ತಂಡ ಯಲ್ಲಾಪುರದಿಂದ ಕದ್ದು ಸಾಗಿಸಲಾದ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಅರಣ್ಯ ಸಂಪತ್ತನ್ನು ವಶಪಡಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಿಲ್ ಮಾಲೀಕ ಮಹಮ್ಮದ್ ಹಯಾತ್ ಅಬ್ದುಲ್ ಕರೀಮ್ ( ಅಲಿಯಾಸ್ ಬಾಷಾ೬೦) ಎಂಬಾತ ಬಂಧಿತ ಅರೋಪಿಯಾಗಿದ್ದಾನೆ.

ಮಿಲ್ ನಲ್ಲಿದ್ದ ೨೭೭೦ಘನ್ ಮೀಟರ್ ೧೧೮ ಸಾಗವಾನಿ ತುಂಡುಗಳನ್ನು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯ ಸುಮಾರು ೬ ಲಕ್ಷ ರೂ ಎನ್ನಲಾಗಿದೆ.
ಇತ್ತೀಚಿಗೆ ಮುಂಡಗೋಡದಲ್ಲಿ ಬಂದಿತನಾಗಿದ್ದ ಅರಣ್ಯ ಕಳ್ಳ ಶಿರಸಿಯ ಅಬ್ದುಲ್ ಖುದ್ದಾಸ್ ಹಮ್ಮದಿಮಿಯಾ ಖತೀಬನಿಂದ ಚಿತ್ರದುರ್ಗ ಸಾಮಿಲ್ ಗೆ ಅಕ್ರಮ ಸಾಗವಾನಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಚಿತ್ರದುರ್ಗದಲ್ಲಿ ಪೂಲೀಸ್ ಸ್ಟೇಶನ್ ಉಪ ನಿರೀಕ್ಷಕ ಸತೀಶ ಹಾಗೂ ಅಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಾಯದಿಂದ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com