ಕೋಳಿವಾಡ ಯಾರು ಅಂತಲೆ ಜನಕ್ಕೆ ಗೊತ್ತಿಲ್ಲ, ಆರ್.ಶಂಕರ್ ಅಂದ್ರೆ ಚಿಕ್ಕಮಕ್ಕಳು ಹೇಳ್ತವೆ..!

ಬದಾಮಿ : ನಾಲ್ಕುವರೆ ವರ್ಷ ಯಾರ ಮನೆಗೂ ಹೋಗದೇ, ಕೇವಲ ಮೂರು ತಿಂಗಳಲ್ಲಿ, ಎಲ್ಲರ ಮನೆ ಮನೆಗೆ ಹೋಗಿ ನನ್ನ ಗೆಲ್ಲಿಸಿ ಅಂದ್ರು. ಕೋಳಿವಾಡ ಯಾರು ಅಂತಲೆ ಜನಕ್ಕೆ ಗೊತ್ತಿಲ್ಲ, ಆರ್.ಶಂಕರ್ ಅಂದ್ರೆ ಚಿಕ್ಕಮಕ್ಕಳು ಕೂಡ ಹೇಳ್ತವೆ.ಮಾಜಿ ಸಚಿವ ಕೆ ಬಿ ಕೋಳಿವಾಡ ಹೇಳಿಕೆಗೆ ತಿರುಗೇಟು ನೀಡಿದ್ದ ಬಾದಾಮಿಯ ಅರಣ್ಯ ಸಚಿವ ಆರ್.ಶಂಕರ್‌.

ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಕಾರಣ ಎನ್ನುವ ಕೋಳಿವಾಡ ಹೇಳಿಕೆಗೆ ತಿರುಗೇಟು ನೀಡಿದ  ಆರ್. ಶಂಕರ್ ಕೋಳಿವಾಡಗೆ ಮಾಡೋಕೆ ಕೆಲಸ ಇಲ್ಲದೇ ಹತಾಶರಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ. ಅವ್ರಿಗೆ ಒಂದ್ಸಾರಿ ತರಾಟೆಗೆ ತೆಗೆದುಕೊಳ್ಳಬೇಕಾಗಿದೆ, ಅವರ ಮಾನಸಿಕ ಸ್ಥಿತಿ ಸರಿಯಿಲ್ಲ, ಮೋಡ ಬಿತ್ತನೆ ಹಾಗೂ ಮರಳು ಮಾಫಿಯಾದಲ್ಲಿ ಕೋಳಿವಾಡ ಕೋಟ್ಯಾಂತರ ರೂ ಕೊಳ್ಳೆ ಹೊಡೆದಿದ್ದಾರೆ.

Image result for ಅರಣ್ಯ ಸಚಿವ ಆರ್.ಶಂಕರ್‌

5 ವರ್ಷ ಯಾರ ಕಣ್ಣಿಗೆ ಕಾಣಿಸಿಲ್ಲ ಚುನಾವಣೆಗೆ ಕೇವಲ ೩ ತಿಂಗಳಲು ಇದ್ದಾಗ ನನಗೆ ವೋಟ್ ಕೋಡಿ ಅಂದ್ರೆ ಜನ ವೋಟ್ ಹಾಕ್ತಾರಾ ?ಸಿದ್ದರಾಮಯ್ಯ ಹೋದ ಕಡೆ ಕಾಂಗ್ರೆಸ್ ಅಭ್ಯರ್ಥಿ ಗಳು ಸೋತಿದ್ರೆ, ಮೋದಿ ಹೋದ ಕಡೆ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ. ಅದು ಜನರ ತೀರ್ಮಾನ ಅಷ್ಟೆ ಎಂದು ಕೋಳಿವಾಡ ಮೇಲೆ ಕಿಡಿಕಾರಿದ್ದಾರೆ.

ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಭಿನ್ನಮತವಿಲ್ಲ, ಐದು ವರ್ಷ ಅಧಿಕಾರ ನಡೆಸುತ್ತೇವೆ. ಸಿದ್ದರಾಮಯ್ಯ ಜೊತೆ ಕೇವಲ ಬದಾಮಿ ಕ್ಷೇತ್ರದ ಅರಣ್ಯ ಇಲಾಖೆಯ ಬಗ್ಗೆ ಚರ್ಚಿಸಿದ್ದೇನೆ, ಯಾವುದೇ ರಾಜಕೀಯ ಬಗ್ಗೆ ಚರ್ಚೆ ನಡೆದಿಲ್ಲ ಎಂದು  ಬಾಗಲಕೋಟೆ ಜಿಲ್ಲೆ ಬದಾಮಿ ಪಟ್ಟಣದ ಅರಣ್ಯ ಸಚಿವ ಆರ್.ಶಂಕರ್ ತಿಳಿಸಿದ್ದಾರೆ.

Leave a Reply

Your email address will not be published.