ಎಚ್‌ಡಿಕೆಗೆ ಸಮ್ಮಿಶ್ರ ಸರ್ಕಾರ ಧರ್ಮದ ಪಾಠ ಕಲಿಸುತ್ತದೆ : ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರು : ವಿವಿ ಸಿಂಡಿಕೇಟ್‌ ನಾಮನಿರ್ದೇಶಿತ ಸದಸ್ಯರ ವಾಪಸ್‌ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಕೆಲವು ಸಿಂಡಿಕೇಟ್‌ ಸದಸ್ಯರಿಗೆ ಕರೆ ಮಾಡಿ ಮಾತನಾಡಿದ್ದು, ಸಮ್ಮಿಶ್ರ ಸರ್ಕಾರ ಧರ್ಮ ಪಾಲಿಸುತ್ತಿಲ್ಲ, ಎಚ್‌ಡಿಕೆಗೆ ಸಮ್ಮಿಶ್ರ ಸರ್ಕಾರದ ಧರ್ಮವನ್ನು ಹೇಳಿಕೊಡುತ್ತೇನೆ ಎಂದು ಹೇಳಿದ್ದಾರೆ, ಜತೆಗೆ ಇದರಲ್ಲಿ ನಮ್ಮ ಪಕ್ಷದ ಬೆಂಬಲವಿದೆ, ನನಗೆ ಗೊತ್ತಿದೆ ಈ ವಿಚಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಪಕ್ಷದ ಇಬ್ಬರು ನಾಯಕರೇ ಇದಕ್ಕೆ ಹೊಣೆ ಎಂದು ಡಿಸಿಎಂ ಜಿ ಪರಮೇಶ್ವರ್‌ ಹಾಗೂ ಸಚಿವ ಡಿಕೆ ಶಿವಕುಮಾರ್‌ ವಿರುದ್ಧ ಹರಿಹಾಯ್ದಿದ್ದಾರೆ. ಎಲ್ಲರಿಗೂ ಅಧಿಕಾರ ಮುಖ್ಯವಾಗಿದೆ ಆದರೆ ಅಧಿಕಾರ ಒಂದೇ ಅಲ್ಲ ಪಕ್ಷವೂ ಕೂಡ ಮುಖ್ಯವಾದದ್ದು, ಅಧಿಕಾರದಾಸೆಗೆ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಕುಮಾರಸ್ವಾಮಿ ಹೇಳಿದಂತೆ ಕುಣಿಯುತ್ತಿದ್ದಾರೆ, ಸಮನ್ವಯ ಸಮಿತಿ ಸಭೆಯಲ್ಲಿ ಮೈತ್ರಿ ಪಾಲನೆ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.

ಸಿಂಡಿಕೇಟ್‌ ಸದಸ್ಯರನ್ನು ಹಿಂಪಡೆಯದಂತೆ ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್‌ಡಿ ಕುಮಾರಸ್ವಾಮಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರಿಗೆ ಪತ್ರ ಬರೆದಿದ್ದರು ಆದರೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ, ಸದಸ್ಯರನ್ನು ಹಿಂಪಡೆಯಲಾಗಿದ್ದು ಈ ಕುರಿತು ಸಿದ್ದರಾಮಯ್ಯ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

One thought on “ಎಚ್‌ಡಿಕೆಗೆ ಸಮ್ಮಿಶ್ರ ಸರ್ಕಾರ ಧರ್ಮದ ಪಾಠ ಕಲಿಸುತ್ತದೆ : ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿ

 • July 19, 2018 at 2:33 PM
  Permalink

  Thank you foг every otһer wonderful post. Wherre lse
  may just aanyone get that tyle of info in such an ideal manner of writing?
  I’ve a presentation subsequent week, and I’m on the look for such info.

  Reply

Leave a Reply

Your email address will not be published.

Social Media Auto Publish Powered By : XYZScripts.com