ಹಾಸನ : ಕಾಡಾನೆಗಳ ದಾಳಿ : ಓರ್ವನಿಗೆ ಗಾಯ, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶ

ಹಾಸನ : ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಅಗನಿ ಗ್ರಾಮದಲ್ಲಿ ಮತ್ತೆ ಕಾಡನೆಗಳಿಂದ ಮನೆ ಮೇಲೆ ದಾಳಿ ನಡೆದಿದೆ. ಕಾಡಾನೆಗಳ ದಾಳಿಯ ವೇಳೆ ಅಗನಿ ಗ್ರಾಮದಲ್ಲಿ ಮನೆಗಳನ್ನು ಜಖಂಗೊಂಡಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ.

ಗ್ರಾಮದ ಶಿವರಾಜ್ ಎಂಬುವವರಿಗೆ ಗಾಯಗೊಂಡಿದ್ದಾರೆ. ನಿನ್ನೆ ಸಂಜೆ ನಡೆದ ಘಟನೆ‌ ನಡೆದಿದ್ದು, ಹಾನುಬಾಳು ಪಂಚಾಯ್ತಿಯ ಅಗನಿ ಗ್ರಾಮದಲ್ಲಿ ಗದ್ದೆ ಕೆಲಸ ಮಾಡುವಾಗ ದಾಳಿ ಮಾಡಿವೆ. ಹೆಚ್ಚಿನ ಚಿಕಿತ್ಸೆಗಾಗಿ ಸಕಲೇಶಪುರದ ಆಸ್ಪತ್ರೆಗೆ ಸಾಗಿಸಲಾಗಿದೆ.

ಅಗನಿ ದೇವರಾಜು ಎಂಬುವವರಿಗೆ ಸೇರಿದ ಮನೆ‌ ಮೇಲೆ ದಾಳಿ ನಡೆದಿದ್ದು, ಕಾಫಿ, ಅಡಿಕೆ, ಬಾಳೆ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿವೆ. ಕಳೆದ ಕೆಲ ದಿನಗಳಿಂದ ಗ್ರಾಮದಲ್ಲೆ ಕಾಡಾನೆಗಳು ಬೀಡುಬಿಟ್ಟಿವೆ.

Leave a Reply

Your email address will not be published.

Social Media Auto Publish Powered By : XYZScripts.com