ಸ್ಯಾಂಡಲ್ ವುಡನಲ್ಲಿ ಇನ್ನೂ ಮುಗಿಯದ ಬಾಸ್ ಚರ್ಚೆ : ಈ ಬಗ್ಗೆ ನಟ ಜಗ್ಗೇಶ್ ಹೇಳಿದ್ದೇನು…?

ಕೆಲ ನಟರ ಅಭಿಮಾನಿಗಳು ತಮ್ಮ ತಮ್ಮ ಹೀರೋನೇ ಕನ್ನಡ ಚಿತ್ರರಂಗದ ಬಾಸ್​ ಎನ್ನುತ್ತಿದ್ದಾರೆ.
ಮೊನ್ನೆಯಷ್ಟೆ ನಟ ಶಿವರಾಜ್ ಕುಮಾರ್ ಅವರವರ ಮನೆಗೆ ಅವರೇ ಬಾಸ್​ ಎಂದು ಹೇಳುವ ಮೂಲಕ ಬಾಸ್  ಎನ್ನುವ ಚರ್ಚೆಗೆ ಫುಲ್​ ಸ್ಟಾಪ್​ ನೀಡುವ ಪ್ರಯತ್ನ ಮಾಡಿದ್ದರು.  ಹಾಗೇಯೇ ಇತ್ತೀಚೆಗಷ್ಟೆ ಹಿರಿಯ ನಟ ಅಂಬರೀಶ್ ಕೂಡ ಅವರವರ ಚಿತ್ರಕ್ಕೆ ಅವರೇ ಬಾಸ್ ಎನ್ನುವ ಮೂಲಕ ಈ ಕುರಿತು ಚರ್ಚೆ ಬೇಡ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇದೀಗ ನವರಸ ನಾಯಕ ಜಗ್ಗೇಶ್​ ಬಾಸ್​ ಯಾರು ಎನ್ನುವ ಪ್ರಶ್ನೆಗೆ ತಮ್ಮದೇಯಾದ ಉತ್ತರ ನೀಡಿದ್ದಾರೆ. ಇಂದು ಟ್ವಿಟ್ಟರ್​ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.

ಅವರು, ‘ಇಂಥ ಪ್ರಶ್ನೆಗಳಿಗೆ ಉತ್ತರ ಭಗವದ್ಗೀತೆಯಲ್ಲಿ ಇದೆ!  ಸೃಷ್ಟಿಯ ಎಲ್ಲ ಯಶಸ್ಸಿಗೆ ಕಾರಣ ದೇವರು..ಮನುಷ್ಯ ನೆಪಮಾತ್ರ!  ದೇವರು ಕಣ್ಣು ಬಿಟ್ಟರೆ ಭಿಕ್ಷುಕ ಸುಪ್ಪತ್ತಿಗೆಯಲ್ಲಿ! ಅವನು ಕಣ್ಣು ಮಚ್ಚಿದರೆ ಸಿಂಹಾಸನವೇ ಮಾಯ!  ಹಾಗಾಗಿ ಎಲ್ಲವನ್ನ ದೇವರ ಮೇಲೆ ಹಾಕಿ ನೆಮ್ಮದಿ, ಭಾತೃತ್ವದಿಂದ ಬಾಳಲು ಕಲಿಯಬೇಕು! ದೇವರ ಮುಂದೆ ಹಣ,ಯಶಸ್ಸು ನಶ್ವರ ! ಜೀವನತತ್ವ ಎನ್ನುವ ಮೂಲಕ ಬಾಸ್​ ಪಟ್ಟದ ಚರ್ಚೆಗೆ ಆಧ್ಯಾತ್ಮಿಕತೆಯ ಲೇಪನ ಮಾಡಿದ್ದಾರೆ.

One thought on “ಸ್ಯಾಂಡಲ್ ವುಡನಲ್ಲಿ ಇನ್ನೂ ಮುಗಿಯದ ಬಾಸ್ ಚರ್ಚೆ : ಈ ಬಗ್ಗೆ ನಟ ಜಗ್ಗೇಶ್ ಹೇಳಿದ್ದೇನು…?

Leave a Reply

Your email address will not be published.

Social Media Auto Publish Powered By : XYZScripts.com