ನಿವೃತ್ತಿಯ ಸುಳಿವು ನೀಡಿದ ಧೋನಿ..? : ಅಂಪೈರ್ ಬಳಿ MSD ಮ್ಯಾಚ್ ಬಾಲ್ ಪಡೆದಿದ್ದೇಕೆ..?

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಲಿದ್ದಾರೆಯೇ..? ಲೀಡ್ಸ್ ಅಂಗಳದಲ್ಲಿ ನಡೆದ ಮೂರನೇ ಏಕದಿನ ಪಂದ್ಯದ ನಂತರ ಹೀಗೊಂದು ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ.

ಪಂದ್ಯದ ನಂತರ ಅಂಪೈರ್ಗಳಾದ ಬ್ರೂಸ್ ಆಕ್ಸೆನ್ ಫರ್ಡ್ ಹಾಗೂ ಮೈಕಲ್ ಗೌಫ್ ಬಳಿ ತೆರಳಿದ ಧೋನಿ ಮ್ಯಾಚ್ ಬಾಲನ್ನು ಕೇಳಿ ಪಡೆದುಕೊಂಡಿದ್ದಾರೆ. ಧೋನಿಯ ಈ ನಡೆ ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ ಎಂಬ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಕೊನೆಯ ಪಂದ್ಯದ ಸ್ಮರಣೆಗಾಗಿ ಧೋನಿ ಮ್ಯಾಚ್ ಬಾಲ್ ಪಡೆದಿರಬಹುದೇ..? ಅಥವಾ ಇಂಗ್ಲೆಂಡ್ ನೆಲದಲ್ಲಿ ಧೋನಿಯ ಕೊನೆಯ ಪಂದ್ಯವಾಗಿರಲಿದೆಯೇ..? ಧೋನಿ ಶೀಘ್ರವೇ ಮಾಧ್ಯಮಗಳೆದುರು ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಲಿದ್ದಾರೆಯೇ..? ಇಂತಹ ಹಲವು ಪ್ರಶ್ನೆ, ಅನುಮಾನಿ, ಊಹೆಗಳನ್ನು ಅಭಿಮಾನಿಗಳ ನಡುವೆ ಹುಟ್ಟುಹಾಕಿದೆ.

Leave a Reply

Your email address will not be published.

Social Media Auto Publish Powered By : XYZScripts.com