40 ವರ್ಷದ ಬಳಿಕ ಪದವಿ ಪರೀಕ್ಷೆಗೆ ಸಿದ್ಧರಾದ ರಾಜಸ್ಥಾನದ ಬಿಜೆಪಿ ಶಾಸಕ..!

ಜೈಪುರ : ರಾಜಸ್ಥಾನ ಬಿಜೆಪಿ ಶಾಸಕ  ಸುಮಾರು 40ವರ್ಷಗಳ ನಂತರ  ಪದವಿ ಪೂರ್ವ ಪರೀಕ್ಷೇ ಬರೆಯಲು ಸಿದ್ಧರಾಗಿದ್ದಾರೆ. ಉದಯಪುರ ಶಾಸಕ 57 ವರ್ಷದ ಪೂಲ್ ಸಿಂಗ್  ಮೀನಾ ತಮ್ಮ ಹೆಣ್ಣು ಮಕ್ಕಳ ಒತ್ತಾಯದ ಮೇರೆಗೆ  ಮೇರೆಗೆ  ವಿದ್ಯಾಭ್ಯಾಸ ಮುಂದುವರೆಸಿದ್ದಾರೆ.

ನಾನು ಓದಿರುವುದು ಕೇವಲ 7ನೇ ತರಗತಿ. ಸೇನೆಯಲ್ಲಿದ್ದ ನನ್ನ ತಂದೆ ತೀರಿಕೊಂಡ  ನಂತರ ಓದು ನಿಲ್ಲಿಸಿ ಕುಟುಂಬದ ನಿರ್ವಹಣೆಗಾಗಿ ಕೃಷಿ ಮಾಡಲು ಶುರುವಾಗಿದೆ. ಆದರೆ ರಾಜಕೀಯಕ್ಕೆ ಪ್ರವೇಶ ಪಡೆದ ಮೇಲೆ ಓದುವಂತೆ ಮನವಿ ಮಾಡಿದರು. ನೀವು ಹಲವು ಜನರರೊಂದಿಗೆ, ಹಿರಿಯ ಅಧಿಕಾರಿಗಳು, ಮುಖಂಡರೊಂದಿಗೆ ಸಂವಹನ ನಡೆಸುತ್ತೀರಿ. ಹಾಗಾಗಿ ಹೆಚ್ಚಿನ  ಓದಿನ ಅವಶ್ಯಕತೆ ಎಂದು ತಿಳಿಹೇಳಿದರು.ಆದರೆ ನನ್ನ ವಯಸ್ಸು ಅಡ್ಡಿ ಎಂದು ಅನುಮಾನವಿತ್ತು. ಆಮೇಲೆ ಮಕ್ಕಳ ಮಾತು ಸರಿ ಎನಿಸಿತು. ನನ್ನ ಆತ್ಮಸಾಕ್ಷಿ ನನನ್ನು ಎಚ್ಚರಿಸಿತು.

ಮೀನಾ ಅವರು ರಾಜಕೀಯ ಚಟುವಟಿಕೆಗಳಲ್ಲಿ ನಿರಂತರವಾಗಿರುವ ಕಾರಣ ದಿನನಿತ್ಯ ತರಗತಿಗೆ ಹಾಜರಾಗಲೂ ಸಾಧ್ಯವಿಲ್ಲ  ಹಾಗಾಗೀ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಸಂಜಯ್ ಲುನಾವತ್  ಅವರು ಮೀನಾ  ಅವರ ಪ್ರಯಾಣದ ವೇಳೆ ಪಾಠವನ್ನು ಬೋಧಿಸುತ್ತಾರೆ.

Leave a Reply

Your email address will not be published.

Social Media Auto Publish Powered By : XYZScripts.com