ಬಜೆಟ್ ತೃಪ್ತಿದಾಯಕವಲ್ಲ, ಆದರೆ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ : ಪ್ರಿಯಾಂಕ್ ಖರ್ಗೆ

ಕಲಬುರ್ಗಿ : ‘ ಬಜೆಟ್ ತೃಪ್ತಿದಾಯಕವಲ್ಲ, ಅವರು ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ ‘ ಎಂದು ಕಲಬುರ್ಗಿಯಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ‘ ಹೈದರಾಬಾದ್ ಕರ್ನಾಟಕಕ್ಕೆ ನಿರೀಕ್ಷಿತ ಮಟ್ಟದಲ್ಲಿ ಬಜೆಟ್ ಲಾಭ ದೊರೆತಿಲ್ಲ. ಎಚ್ ಕೆ ಆರ್ ಡಿ ಬಿಗೆ ಅನುದಾನ ಹರಿದು ಬರುತ್ತಿರುವ ಹಿನ್ನೆಲೆ ಅಭಿವೃದ್ಧಿ ಸಾಧಿಸಲು ಸಾಧ್ಯ. ಹೀಗಾಗಿ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ ‘ ಎಂದಿದ್ದಾರೆ.

‘ ಮಾಜಿ ಸಚಿವ ಎಚ್ ಕೆ ಪಾಟೀಲ್ ಹೇಳಿಕೆ ಅವರ ವೈಯಕ್ತಿಕವಾದದ್ದು, ಬಜೆಟ್ ಕೇವಲ ಮೂರು ಜಿಲ್ಲೆಗೆ ಸೀಮಿತ ಅಂತ ಹೇಳಿರೋದು ಅವರ ವಯಕ್ತಿಕ ವಿಚಾರ
ಹಾಗೇಕೆ ಹೇಳಿದ್ದಾರೆ ನನಗೊಂದು ಗೊತ್ತಿಲ್ಲ. ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವುದು ಹೈಕಮಾಂಡ ವಿವೇಚನೆಗೆ ಬಿಟ್ಟಿದ್ದು. ಒಂದು ತಿಂಗಳೋಳಗಾಗಿ ಉಸ್ತುವಾರಿ ಸಚಿವರ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಹೈಕಮಾಂಡ ಯಾವುದೇ ಹುದ್ದೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ ‘ ಎಂದು
ಕಲಬುರ್ಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com