ಅನ್ನಭಾಗ್ಯ ಅಕ್ಕಿಮೂಟೆಗಳು ನಾಪತ್ತೆ ಕೇಸ್ : ಆಹಾರ ಇಲಾಖೆಯ ಉಪ ನಿರ್ದೇಶಕ ಅಮಾನತು

ಮೈಸೂರು:  ನಂಜನಗೂಡಿನ ಗೋದಾಮಿನಲ್ಲಿ ಅನ್ನಭಾಗ್ಯ ಅಕ್ಕಿಮೂಟೆಗಳು ನಾಪತ್ತೆಯಾದ ವಿಚಾರಕ್ಕೆಸಂಬಂಧಿಸಿದಂತೆ ಮೈಸೂರಿನ ಆಹಾರ ಇಲಾಖೆ ಉಪ ನಿರ್ದೇಶಕ ಕೆ.ರಾಮೇಶ್ವರಪ್ಪ ಅವರನ್ನ ಅಮಾನತು ಮಾಡಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ.

ಮೈಸೂರು ಜಿಲ್ಲೆಯ ನಂಜನಗೂಡಿನ ಎಪಿಎಂಸಿ ಗೋದಾಮಿನಿಂದ ಅಕ್ಕಿ ಬೆಳೆ ನಾಪತ್ತೆಯಾಗಿತ್ತು. ತಲಾ 50ಕೆ.ಜಿ ತೂಕದ 1200ಕ್ಕೂ ಹೆಚ್ಚು ಅನ್ನಭಾಗ್ಯದ ಮೂಟೆ ನಾಪತ್ತೆಯಾಗಿದ್ದವು ಇದಕ್ಕೆ ಸಂಬಂಧ  ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಲ್ಲಿ ಅಧಿಕಾರಿ ವಿಫಲವಾಗಿದ್ದಾರೆ ಎಂಬ ಆರೋಪದ ಮೇಲೆ ಆಹಾರ ಇಲಾಖೆಯ ಹಿರಿಯ ಅಧಿಕಾರಿ ರಾಮೇಶ್ವರಪ್ಪರನ್ನು ಅಮಾನತು ಮಾಡಲಾಗಿದೆ.

https://starofmysore.com/wp-content/uploads/2017/04/news-12.jpg

ಇದೇ ಅಧಿಕಾರಿ ಈ ಬಗ್ಗೆ ನಂಜನಗೂಡು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗಾ ಸರಿಯಾದ ಮಾಹಿತಿ ನೀಡದ ಹಿನ್ನಲೆ ಉಪ ನಿರ್ದೇಶಕ ರಾಮೇಶ್ವರಪ್ಪ ಅವರನ್ನ ಸಸ್ಪೆಂಡ್ ಮಾಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ. ಇದರ ಜೊತೆ ಗೋದಾಮಿನ ಮ್ಯಾನೆಜರ್ ಮೈಲಾರಯ್ಯ ಹಾಗೂ ಸಹಾಯಕ ಬಸವರಾಜ್ ಕೂಡ ಸೇವೆಯಿಂದ ಅಮಾನತು ಮಾಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com