ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ಪ್ರಕರಣ : ‘ಮೂಲಭೂತವಾದಿ ಶಕ್ತಿಗಳನ್ನು ಹತ್ತಿಕ್ಕಬೇಕು’ – ಮುರುಘಾ ಶ್ರೀ ಹೇಳಿಕೆ

ಚಿತ್ರದುರ್ಗ : ಸ್ವಾಮಿ ಅಗ್ನಿವೇಶ್ ಅವರ ಮೇಲೆ ಹಲ್ಲೆ ಪ್ರಕರಣದ ಕುರಿತು ಚಿತ್ರದುರ್ಗದ ಮುರಾಘಾ ಶ್ರೀಗಳಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ‘ ಮೂಲಭೂತವಾದಿಗಳು ಸ್ವಾಮಿ ಅಗ್ನಿವೇಶ್ ಅವರ ಮೇಲೆ ಹಲ್ಲೆ ಮಾಡಿರುವುದು ದುಃಖ ತಂದಿದೆ. ಮೂಲಭೂತವಾದಿಗಳ ಉಪಟಳ ಹೆಚ್ಚಾಗಿದೆ. ಸಮಾಜದ ಹಿತಕ್ಕಾಗಿ, ಸಮಾನತೆಗಾಗಿ ಹೋರಾಟ ಮಾಡುವವರ ಮೇಲೆ ಹಲ್ಲೆ ತೀವ್ರ ಖಂಡನೀಯವಾಗಿದೆ ‘ ಎಂದಿದ್ದಾರೆ.

‘ ಜಾರ್ಖಾಂಡ್ ನಲ್ಲಿ ಆಮಂತ್ರಣದ ಕಾರ್ಯಕ್ರಮದಲ್ಲಿ ಸ್ವಾಮಿ ಅಗ್ನಿವೇಶ್ ಭಾಗವಹಿಸಿದ್ದರು. ಅಂತಹ ಸಮಾಜಿಕ ಹೋರಾಟಗಾರರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಇಂತಹ ಮೂಲಭೂತವಾದಿ ಶಕ್ತಿಗಳನ್ನ ಹತ್ತಿಕ್ಕಬೇಕಿದೆ. ಈ ಕೂಡಲೇ ಸರ್ಕಾರ ಹಲ್ಲೆಕೋರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ‘ ಎಂದಿದ್ದಾರೆ.

‘ ಸಾಮಾಜಿಕ ಹೋರಾಟಗಾರರನ್ನ, ಸಮಾನತೆಗಾಗಿ ಹೋರಾಟಗಾರರನ್ನ ರಕ್ಷಣೆ ಮಾಡಬೇಕಿದೆ. ಸ್ವಾಮೀಜಿ ಅಗ್ನಿವೇಶ್ ಅವರ ಮೇಲೆ ಶಾರೀರಿಕ ಹಲ್ಲೆ ನಡೆಸಿರುವುದು ದುಃಖ ತಂದಿದೆ ‘ ಎಂದು ಚಿತ್ರದುರ್ಗದಲ್ಲಿ ಮುರಾಘಾ ಶ್ರೀಗಳು ಖಂಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com