ಇಂದಿನಿಂದ ಮುಂಗಾರು ಅಧಿವೇಶನ : ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಸಿದ್ಧವೆಂದ ಮೋದಿ

ನವದೆಹಲಿ :ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಳ್ಳುತ್ತಿದ್ದು , ಎಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಮುಂಗಾರು ಅಧಿವೇಶನ ಹಿನ್ನಲೆಯಲ್ಲಿ ರಾಜಧಾನಿ ದೆಹಲಿಯ ಸಂಸತ್ತು ಭವನಕ್ಕೆ ಆಗಮಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ ‘ಸಂಸತ್ತು ಅಧಿವೇಶನದಲ್ಲಿ ಚರ್ಚೆಗಳು ಯಾವುದೇ ತೊಡಕುಗಳಿಲ್ಲದೆ ಸಾಗಲಿದೆ ಎಂಬ ಭರವಸೆಯಿದೆ. ಯಾವುದೇ ವಿಚಾರವಾದರೂ, ಯಾವುದೇ ಪಕ್ಷ ಬೇಕಾದರೂ ಸದನದಲ್ಲಿ ದನಿ ಎತ್ತಬಹುದು. ಎಲ್ಲಾ ರೀತಿಯ ವಿಚಾರಗಳ ಕುರಿತಂತೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ’ ಎಂದು ಹೇಳಿದ್ದಾರೆ.

Image result for ಸಂಸತ್ತಿನ ಮುಂಗಾರು ಅಧಿವೇಶನ

ಭಾರೀ ಮಳೆಯಿಂದಾಗಿ ಹಲವು ರಾಜ್ಯಗಳು ಸಂಕಷ್ಟಗಳನ್ನು ಅನುಭವಿಸುತ್ತಿವೆ. ಕೆಲ ರಾಜ್ಯಗಳಲ್ಲಿ ಸರಾಸರಿಗಿಂತಲೂ ಕಡಿಮೆ ಮಳೆಯಾಗಿದೆ. ಈ ವಿಚಾರಗಳ ಕುರಿತಂತೆಯೂ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇಂದಿನಿಂದ ಆರಂಭವಾಗುತ್ತಿರುವ ಅಧಿವೇಶನದಲ್ಲಿ ಯಥಾಪ್ರಕಾರ ಕೋಲಾಹಲ ಎಬ್ಬಿಸುವ ನಿರೀಕ್ಷೆಗಳಿದ್ದು,  ಮಕ್ಕಳ ಕಳ್ಳರೆಂದು ಅಮಾಯಕರನ್ನು ಬಡಿದು ಕೊಲ್ಲುತ್ತಿರುವುದು, ನಿರುದ್ಯೋಗ, ಮಹಿಳಾ ಸುರಕ್ಷತೆ, ಜಮ್ಮು-ಕಾಶ್ಮೀರ ಪರಿಸ್ಥಿತಿ, ಕದನ ವಿರಾಮ ಉಲ್ಲಂಘನೆ, ಬೆಲೆ ಏರಿಕೆ ಇತ್ಯಾದಿ ವಿಚಾರಗಳನ್ನು ಪ್ರಸ್ತಾಪ ಮಾಡಲು ಕಾಂಗ್ರೆಸ್ ಮುಂದಾಳತ್ವದ ಪ್ರತಿಪಕ್ಷಗಳು ನಿರ್ಧರಿಸಿವೆ. ಈ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡಿದರೆ ಮಾತ್ರ ಸುಗಮ ಸಂಸತ್ ಕಲಾಪಕ್ಕೆ ಅವಕಾಶ ನೀಡುವುದಾಗಿಯೂ ವಿಪಕ್ಷಗಳು ತಿಳಿಸಿವೆ.

Image result for ಸಂಸತ್ತಿನ ಮುಂಗಾರು ಅಧಿವೇಶನ

ಮುಂಗಾರು ಅಧಿವೇಶನದಲ್ಲಿ ಸುಮಾರು 25 ಮಸೂದೆಗಳನ್ನು ಪಟ್ಟಿ ಮಾಡಲಾಗಿದೆ. ಇದರಲ್ಲಿ 18 ಹೊಸ ವಿಧೇಯಕಗಳಾದರೆ, 7 ವಿಧೇಯಕಗಳು ಕಳೆದ ಅಧಿವೇಶನದಿಂದ ಮುಂದುವರೆದಿವೆ. ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ-2018, ತ್ರಿವಳಿ ತಲಾಖ್ ಮಸೂದೆ-2017 ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕು ರಕ್ಷಣೆ ಮಸೂದೆ-2016 ಪ್ರಮುಖವಾದವು.

ಇನ್ನು ಈ ಹಿಂದಿನ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ವಿಫಲ ಯತ್ನ ನಡೆಸಿದ್ದ ಪ್ರತಿಪಕ್ಷಗಳು ಈ ಅಧಿವೇಶನದಲ್ಲಿ ಪುನಃ ಅವಿಶ್ವಾಸ ನಿಲುವಳಿ ಮಂಡಿಸಲು ನಿರ್ಧರಿಸಿವೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ನಿರಾಕರಣೆಗೆ ಸಂಬಂಧಿಸಿದಂತೆ ಅವಿಶ್ವಾಸ ನಿರ್ಣಯ ಮಂಡನೆಗೆ ಸಮ್ಮತಿ ಸೂಚಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com