ಮಗುವಿಗೆ ಸ್ತನಪಾನ ಮಾಡಿಸುತ್ತಲೇ ಬಿಕಿನಿಯಲ್ಲಿ ಕ್ಯಾಟ್ ವಾಕ್ ಮಾಡಿದ ಮಾಡೆಲ್…!

ಮಿಯಾಮಿ : ಸಾರ್ವಜನಿಕ ಸ್ಥಳಗಳಲ್ಲಿ ಸ್ತನಪಾನ ಮಾಡಿರುವ ವಿಷಯಗಳು ಅಮೆರಿಕದಲ್ಲಿ ಈಗ ಬಹು ಚರ್ಚಿತ ವಿಷಯವಾಗಿದ್ದು, ಇದೇ ಸಂದರ್ಭದಲ್ಲೇ  ರೂಪದರ್ಶಿಯೊಬ್ಬಳು ಫ್ಯಾಷನ್ ಶೋ ಒಂದರಲ್ಲಿ ಕ್ಯಾಟ್ ವಾಕ್  ಮಾಡುತ್ತಲೇ ತನ್ನ ಐದು ಮಗುವಿಗೆ ಸ್ತನಪಾನ ಮಾಡಿಸಿ ಸುದ್ದಿಯಾಗಿದ್ದಾಳೆ.

ಅಮೆರಿಕಾದ ಮೋಹಕ ನಗರಿ ಮಿಯಾಮಿಯಲ್ಲಿ ನಡೆದ ವಾರ್ಷಿಕ ಸ್ವಿಮ್ ಸೂಟ್ ಫ್ಯಾಷನ್ ಶೋನಲ್ಲಿ ಮಾರಾ ಚಿನ್ನ ವರ್ಣದ ಬಿಕಿನಿ ಧರಿಸಿ ಮಾದಕ ಮೈಮಾಟದೊಂದಿಗೆ ಬೆಕ್ಕಿನ ನಡಿಗೆಯಲ್ಲಿ ಹೆಜ್ಜೆ ಹಾಕುವ ಜೊತೆಗೆ ತನ್ನಮುದ್ದಾದ ಹೆಣ್ಣು ಮಗು ಆರಿಯಾ ಕಿವಿಗೆ ಹೆಡ್‍ಫೋನ್ ಹಾಕಿ  ಸ್ತನಪಾನ ಮಾಡಿಸಿರು ದೃಶ್ಯ ಈಗ ಎಲ್ಲೇಡೆ ವೈರೆಲ್ ಆಗಿದೆ.

ಈಕೆ ರ್ಯಾಂಪ್ ಮೇಲೆ ಈ ರೀತಿ ಕಾಣಿಸಿಕೊಂಡಿದ್ದು, ಕೆಲವರಿಗೆ ಅಚ್ಚರಿ ಉಂಟು ಮಾಡಿತು. ಈ ಬಗ್ಗೆ ಪರ-ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ತನಪಾನ ಮಾಡಿರುವುದು ತಪ್ಪಲ್ಲ ಎಂದು ಜಾಗೃತಿ ಮೂಡಿಸುತ್ತಿರುವ ಅಮೆರಿಕನ್ ಮಹಿಳೆಯರು ನಿರ್ಭೀತವಾಗಿ ಇದನ್ನು ಅನುಷ್ಠಾನಗೊಳಿಸುವ ಮೂಲಕ ಗಮನಸೆಳೆಯುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com