ರೈತನ ಆತ್ಮಹತ್ಯೆಗೆ ತಿರುವು : ಕಿರುಕುಳ ನೀಡಿದ್ದಕ್ಕೆ ಪತ್ನಿ, ಮಗ ಸೇರಿ ಕುತ್ತಿಗೆ ಹಿಸುಕಿ ಕೊಲೆ ..!

ಹಾಸನ : ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಗಂಡನನ್ನ ಪತ್ನಿಯೇ ಮಗನ ಜೊತೆಗೂಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ನಂತರ ಸಾಲಬಾಧೆಯ ಆತ್ಮಹತ್ಯೆ ಎಂದು ಬಿಂಬಿಸಿದ್ದ ಘಟನೆ ಬೇಲೂರು ತಾಲ್ಲೂಕಿನ ಮತ್ತಾವರದಲ್ಲಿ ನಡೆದಿದೆ. ಇದೀಗ ಪ್ರಕರಣ ತಿರುವು ಪಡೆದುಕೊಂಡಿದೆ.

45ವರ್ಷದ ಯೋಗೇಶ್‌ಗೌಡ ಮೃತ ರೈತ. ಈತನ ಪತ್ನಿ ಗಾಯತ್ರಿ ಮತ್ತು ಪುತ್ರ ದರ್ಶನ್‌ ನನ್ನು ಅರೇಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಜೂನ್‌ 9 ರಂದು ಗಾಯತ್ರಿ ಠಾಣೆಗೆ ಆಗಮಿಸಿ ಪತಿ ಬೋರ್ ವೆಲ್ ತೆಗಿಸಲು ಸಾಲ ಮಾಡಿಕೊಂಡಿದ್ದರು. ಸಾಲದಿಂದ ಜುಗುಪ್ಸೆಗೊಂಡು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ವರದಿಯಲ್ಲಿ ಉಸಿರು ಕಟ್ಟಿ ಸತ್ತಿರುವುದಾಗಿ ತಿಳಿದುಬಂದಿತ್ತು. ಗಾಯತ್ರಿ ಮತ್ತು ದರ್ಶನ್‌ರನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು. ಸಿಪಿಐ ಲೋಕೇಶ್‌ ನೇತೃತ್ವದಲ್ಲಿ ಅರೇಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನ ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com