ಬಾಗಲಕೋಟೆ : ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಕ್ಕೆ ಸಾಂತ್ವನ ಹೇಳಿದ ಬದಾಮಿ ಶಾಸಕ..!

ಬಾಗಲಕೋಟೆ : ಸಾಲ ಮನ್ನಾ ಆಗದ ಕಾರಣ ಆತ್ಮಹತ್ಯೆಗೆ ಶರಣಾದ ಯುವರೈತ ಮಂಜುನಾಥ ಹೊಸಮನಿ ಮನೆಗೆ ಬದಾಮಿ ಶಾಸಕರಾದ  ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬೀರನೂರು ಗ್ರಾಮದಲ್ಲಿರುವ ರೈತನ ಮನೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ರೈತನ ಸಾವಿನ ಬಗ್ಗೆ ಶೋಕ ವ್ಯಕ್ತಪಡಿಸಿದರು. ಬಾದಾಮಿ ಶಾಸಕರೂ ಆಗಿರುವ ಅವರು, ವೈಯಕ್ತಿಕವಾಗಿ ಕುಟುಂಬಸ್ಥರಿಗೆ 50 ಸಾವಿರ ರೂ. ಪರಿಹಾರ ನೀಡಿದರು.

ಈ ವೇಳೆ ಮೃತನ ತಂದೆ ತಾಯಿ, ಸಿದ್ದರಾಮಯ್ಯ ಎದುರು ತಮ್ಮ ದುಃಖ ತೋಡಿಕೊಂಡರು. ಅವರಿಗೆ ಸಮಾಧಾನ ಹೇಳಿದ ಸಿದ್ದರಾಮಯ್ಯ, ಸ್ಥಳದಲ್ಲಿದ್ದ ಎಸಿ ಅವರಿಗೆ ಸರ್ಕಾರದಿಂದ ಶೀಘ್ರ ಪರಿಹಾರ ಧನ ವಿತರಿಸುವಂತೆ ಸೂಚನೆ ನೀಡಿದರು.

ಚಾಲ್ತಿ ಸಾಲ ಮನ್ನಾ ಆಗದಿದ್ದಕ್ಕೆ ಮನನೊಂದು ವರ್ಷದ ಮಂಜುನಾಥ ಹೊಸಮನಿ  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟರು.

Leave a Reply

Your email address will not be published.

Social Media Auto Publish Powered By : XYZScripts.com