Cricket : ಜೋ ರೂಟ್ ಅಜೇಯ ಶತಕ : ಇಂಗ್ಲೆಂಡ್ ತಂಡಕ್ಕೆ 2-1 ಸರಣಿ ಜಯ

ಲೀಡ್ಸ್ ನ ಹೆಡಿಂಗ್ಲೆ ಮೈದಾನದಲ್ಲಿ ಮಂಗಳವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 8 ವಿಕೆಟ್ ಗಳಿಂದ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇಯಾನ್ ಮಾರ್ಗನ್ ಪಡೆ 2-1 ರಿಂದ ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಮೊತ್ತ ಕಲೆಹಾಕಿತು. ಭಾರತದ ಪರವಾಗಿ ನಾಯಕ ವಿರಾಟ್ ಕೊಹ್ಲಿ 71, ಶಿಖರ್ ಧವನ್ 44, ಎಮ್ ಎಸ್ ಧೋನಿ 42 ರನ್ ಬಾರಿಸಿದರು. ಸ್ಪಿನ್ ಬೌಲರ್ ಆದಿಲ್ ರಾಶಿದ್ 3 ವಿಕೆಟ್ ಪಡೆದರು.

Image result for joe root century leeds 100 india

ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 44.3 ಓವರುಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 260 ರನ್ ಸೇರಿಸಿ ಗೆಲುವು ದಾಖಲಿಸಿತು. ಇಂಗ್ಲೆಂಡ್ ಪರವಾಗಿ ಜೋ ರೂಟ್ 100* ಹಾಗೂ ಇಯಾನ್ ಮಾರ್ಗನ್ 88* ರನ್ ಗಳಿಸಿದರು. ಆದಿಲ್ ರಾಶಿದ್ ಪಂದ್ಯಶ್ರೇಷ್ಟ ಹಾಗೂ ಜೋ ರೂಟ್ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರು.

 

Leave a Reply

Your email address will not be published.