ಕೋಮು ಸೌಹಾರ್ದತೆ ನೆಲೆಸಲು ತುಂಬಾ ಪ್ರಯತ್ನ ಪಡುತ್ತಿದ್ದೇನೆ : ಪೇಜಾವರ ಶ್ರೀ

ದಾವಣಗೆರೆ : ‘ ರಾಮಮಂದಿರ ನಿರ್ಮಾಣಕ್ಕೆ ಅನೇಕ ತೊಡಕುಗಳಿವೆ. ಸುಪ್ರೀಂ ಕೋರ್ಟ್ ಜಡ್ ಮೆಂಟ್ ಆಗಬೇಕು ಅಲ್ಲಿವರೆಗೂ ಏನೂ ಸಾಧ್ಯವಿಲ್ಲ. ರಾಮಮಂದಿರ ನಿರ್ಮಾಣಕ್ಕೆ ಎಲ್ಲರೂ ಉತ್ಸುಕರಾಗಿದ್ದಾರೆ ಆದರೆ ಇದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ‘ ಎಂದು ಉಡುಪಿಯ ಪೇಜಾವರ ಶ್ರೀಗಳು ಹೇಳಿದ್ದಾರೆ.

‘ ಗಂಗಾ ಶುದ್ಧೀಕರಣದ ಬಗ್ಗೆ ನಾನು ಸೂಚನೆಯನ್ನೇ ಕೊಟ್ಟಿದ್ದೇನೆ. ಬೇಗನೆ ಕೆಲಸ ಕೈಗೆತ್ತಿಕೊಳ್ಳುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈಗಾಗಲೇ ಕೆಲಸ ಕೈಗೆತ್ತಿಕೊಳ್ಳಬೇಕಿತ್ತು ಇನ್ನೂ ಆಗಿಲ್ಲ ಈ ಬಗ್ಗೆ ಕೇಂದ್ರಕ್ಕೆ ಸೂಚನೆ ನೀಡಲಿದ್ದೇನೆ ‘ ಎಂದು ಪೇಜಾವರ ಶ್ರೀ ದಾವಣಗೆರೆಯಲ್ಲಿ ಹೇಳಿಕೆ ನೀಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಗಂಗಾ ಜಲ ಶುದ್ಧೀಕರಣ ಹಾಗೂ ರಾಮಮಂದಿರ ವಿಚಾರ ಬಂಡವಾಳ ಮಾಡಿಕೊಳ್ಳುವ ಪ್ರಶ್ನೆಗೆ ಪೇಜಾವರ ಶ್ರೀ ತೀಕ್ಷ್ಣವಾಗಿ ಹೇಳಿಕೆ ನೀಡಿದ್ದು, ‘ ನಾನು ಸಲಹೆ ಸೂಚನೆ ಕೊಡಬಹುದು ಆದರೆ ಬಿಜೆಪಿ ಪಕ್ಷದವರು ನಾನಲ್ಲ. ರಾಜಕೀಯ ವಿಚಾರದಲ್ಲಿ ನಾವು ಕೈಹಾಕುವುದಿಲ್ಲ ‘ ಎಂದಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರದಲ್ಲಿ ಮಂಗಳೂರು ಉಡುಪಿಗೆ ಭೇಟಿ ಕೊಡದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ ಸಿಎಂ ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ್ದಾರೆ. ‘ ಕುಮಾರಸ್ವಾಮಿಯವರೇ ಭೇಟಿ ಕೊಡಬೇಕೆಂದೇನಿಲ್ಲ ಅವರ ಪರ ಶಾಸಕರು ಸಚಿವರಿದ್ದಾರೆ ಅವರೇ ನೋಡಿಕೊಳ್ಳುತ್ತಾರೆ ‘ ಎಂದು ಪೇಜಾವರ ಶ್ರೀ ಹೇಳಿಕೆ ನೀಡಿದ್ದಾರೆ.

ಮಂಗಳೂರು ಹಾಗೂ ಉಡುಪಿ ಭಾಗದಲ್ಲಿ ಕೋಮು ಸೌಹಾರ್ದತೆ ಹದಗೆಟ್ಟ ಹಿನ್ನೆಲೆ ಪೇಜಾವರಶ್ರೀ ದಾವಣಗೆರೆಯಲ್ಲಿ ಹೇಳಿಕೆ ನೀಡಿದ್ದು ‘ ಕೋಮು ಸೌಹಾರ್ದತೆ ನೆಲೆಸಲು ತುಂಬಾ ಪ್ರಯತ್ನ ಪಡುತ್ತಿದ್ದೇನೆ. ಕೋಮು ಸೌಹಾರ್ದತೆ ಬಗ್ಗೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡುತ್ತೇವೆ. ಯಾರ ಹತ್ಯೆ ನಡೆದರೂ ಎಲ್ಲರೂ ಒಗ್ಗೂಡಿ ಬೆಂಬಲಕ್ಕೆ ನಿಲ್ಲಬೇಕು ಅದು ಹಿಂದೂ ಆದರೂ ಮುಸ್ಲಿಂ ಆದರೂ ಸರಿ ‘ ಎಂದಿದ್ದಾರೆ.

Leave a Reply

Your email address will not be published.