ವಿಜಯಪುರ : 30 ಸಾವಿರ ಸಾಲ ವಾಪಸ್ ನೀಡದ್ದಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ..!

ವಿಜಯಪುರ : ಮೂವತ್ತು ಸಾವಿರ ಸಾಲ ನೀಡದ ಕಾರಣ ವ್ಯಕ್ತಿಗೆ ಮಾರಣಾಂತಿಕ‌ ಹಲ್ಲೆ ನಡೆಸಿರುವ ಘಟನೆ ವಿಜಯಪುರ ತಾಲೂಕಿನ ಬರಟಗಿ ತಾಂಡಾದಲ್ಲಿ ನಡೆದಿದೆ.  ಸಾಲ ನೀಡಿದ ವ್ಯಕ್ತಿ ಮನ ಬಂದಂತೆ ಥಳಿಸಿದ್ದಾನೆ. ವಿಜಯಪುರ ‌ನಗರದ ರೈಲ್ವೇ ‌ನಿಲ್ದಾಣದ ಬಳಿಯ ತಾಜುದ್ದೀನ್ ಕಾಲೋನಿಯ‌ ನಿವಾಸಿ ಪ್ರತಾಪ್ ‌ಕೇಶು ನಾಯ್ಕ್ 35 ತೀವ್ರ ಥಳಿತಕ್ಕೊಳಗಾಗಿದ್ದಾನೆ.

ವಿಜಯಪುರ ತಾಲೂಕಿನ ಬರಟಗಿ ತಾಂಡಾ ಮೂಲದ ಸಂತೋಷ ರಜಪೂತ ಹಾಗೂ ಸಹಚರರಿಂದ ಹಲ್ಲೆ ಆರೋಪ ಕೇಳಿಬಂದಿದೆ.  ಅಟೋ ಕೊಳ್ಳಲು ಪ್ರತಾಪ ಸಂತೋಷನಿಂದ ಮೂವತ್ತು ಸಾವಿರ ಸಾಲ ಮಾಡಿದ್ದ. ನಂತರ ಮೂರು ವರ್ಷವಾದರೂ‌ ಸಾಲ ಮರುಪಾವತಿ ಮಾಡದ ಕಾರಣ ಕುಕೃತ್ಯ ಎಸಗಲಾಗಿದೆ.

ನಿನ್ನೆ ವಿಜಯಪುರ ನಗರದಿಂದ ಪ್ರತಾಪ್ ನನ್ನು  ಬರಟಗಿ ತಾಂಡಾದ ಜಮೀನಿಗೆ ಕರೆಯ್ದೊಯ್ದು ಸಂತೋಷ ಹಾಗೂ ಆರು‌ ಜನ‌ ಸಹಚರರು  ಹಗ್ಗದಿಂದ ಕಟ್ಟಿ ಹಾಕಿ ಹಗ್ಗದಿಂದ ಮೈಮೇಲೆ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ. ನಿನ್ನೆ ತಡರಾತ್ರಿ ವಿಜಯಪುರ ನಗರದ ಸಿಂದಗಿ ನಾಕಾ ಬಳಿ ದುಷದ್ಕರ್ಮಿಗಳು ಬಿಟ್ಟು ಹೋಗಿದ್ದಾರೆ. ಮೈಮೇಲೆ ಬಾಸುಂಡೆ ಮೂಡಿದ್ದು ಪ್ರತಾಪ್ ನೋವಿನಿಂದ ನರಳುತ್ತಿದ್ದಾನೆ.

ಕುಟುಂಬದ ಸದಸ್ಯರು ಭಯದ ವಾತಾವರಣದಲ್ಲಿದ್ದು, ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

Leave a Reply

Your email address will not be published.