ಮಹಾರಾಷ್ಟ್ರದ ನಡೆ ಖಂಡಿಸಿ ಹುಬ್ಬಳ್ಳಿ ಕಾರ್ಯಕರ್ತರಿಂದ ಪ್ರತಿಭಟನೆ…!

ಹುಬ್ಬಳ್ಳಿ : ನಿನ್ನೆ ನಂದಿನಿ ಹಾಲನ್ನು ರಸ್ತೆಗೆ ಚೆಲ್ಲಿದ ಮಹಾರಾಷ್ಟ್ರ ಹಾಲು ಒಕ್ಕೂಟದ ನಡೆಯನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಹಾಲಿನ ದರ ಕುಸಿತ ಕಂಡಿದೆ. ಅದಕ್ಕಾಗಿ ಪಕ್ಕದ ಗಡಿ ಗ್ರಾಮದ ಜನರು ಹಾಲನ್ನು ಸರಬರಾಜ ಮಾಡದೆ ಮನೆಯಲ್ಲಿ ಹಾಲನ್ನು ಬಕೆಟ್ನಲ್ಲಿ ಸಂಗ್ರಹ ಮಾಡಿ ಸ್ನಾನ ಮಾಡಿ  ಸರ್ಕಾರ ಹಾಲಿನ ದರ ಹೆಚ್ಚಳ ಮಾಡುವಂತೆ ಒತ್ತಾಯಿಸಿ ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದಿಂದಲು ಸಾಕಷ್ಟು ರೈತರು ಹಾಲನ್ನು ಮಹಾರಾಷ್ಟ್ರಕ್ಕೆ ಸರಬರಾಜ ಮಾಡುತ್ತಾರೆ.

ಮಹಾರಾಷ್ಟ್ರದಲ್ಲಿ ವಾಹನ ಚಾಲಕರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಅಲ್ಲಿನ ಕಾರ್ಯಕರ್ತರು ಭಾರತ್ ಡೈರಿ ಹಾಲನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಖಂಡಿಸಿ   ಹುಬ್ಬಳ್ಳಿಯಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು  ಮಹಾರಾಷ್ಟ್ರದ ಏಜೇನ್ಸಿ ಭಾರತ್ ಡೈರಿ ಮುಂದೆ ಕಾರ್ಯಕರ್ತರು ಏಜೇನ್ಸಿ ಬೋರ್ಡ್ ಗೆ ಹಾಗೂ ಮಹಾರಾಷ್ಟ್ರ ಮೂಲದ ಹಾಲಿನ ವಾಹನಕ್ಕೆ ಕೆಸರು ಬಳಿದು, ಧಿಕ್ಕಾರ ಕೂಗಿ ಹಾಲನ್ನು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com