ಹೊಳಲ್ಕೆರೆ ಬಿಜೆಪಿ ಶಾಸಕ ಎಂ. ಚಂದ್ರಪ್ಪಗೆ ತಲೆಯಲ್ಲಿ ಜ್ಞಾನವೇ ಇಲ್ಲ : ಎಚ್. ಆಂಜನೇಯ

ಚಿತ್ರದುರ್ಗ ನಗರದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿಕೆ ನೀಡಿದ್ದಾರೆ. ‘ ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪಗೆ ತಲೆಯಲ್ಲಿ ಜ್ಞಾನವೇ ಇಲ್ಲ. 6 ಕೋಟಿ ವೆಚ್ಚದ ಬಸ್ ನಿಲ್ದಾಣ ಕಾಮಗಾರಿ ತಡೆ ಹಿಡಿಯಲಾಗಿದೆ. ವಿನಾಕಾರಣ ಅಧಿಕಾರಿಗಳಿಗೆ ಕಾಮಗಾರಿ ಬದಲಾಯಿಸಲು ಸೂಚನೆ ನೀಡುತ್ತಿದ್ದಾರೆ. ಶಾಸಕ ಎಂ.ಚಂದ್ರಪ್ಪಗೆ ಅದೊಂದು ದೊಡ್ಡ ಖಾಯಿಲೆ ‘ ಎಂದಿದ್ದಾರೆ.

‘ ಅವರಿಗೆ ಶಕ್ತಿ, ಜ್ಞಾನ ಇದ್ದರೆ ಹೊಸ ಯೋಜನೆ ತರಲಿ. ನಾವು ತಂದಿರುವ ಯೋಜನೆಗಳ ದಿಕ್ಕು ತಪ್ಪಿಸೋದು ಬೇಡ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆ ತಂದಿದ್ದೇವೆ. ಯೋಜನೆ ಫಲಾನುಭವಿಗಳಿಗೆ ತಲುಪುವಲ್ಲಿ ಶಾಸಕ ಚಂದ್ರಪ್ಪ ಅಡ್ಡಗಾಲು ಹಾಕಿದ್ದಾರೆ. ನನ್ನ ಅವಧಿಯ ಅಭಿವೃದ್ಧಿ ಕಾಮಗಾರಿ ತಡೆಯುವುದು ಬಿಡಬೇಕು ‘ ಎಂದು ಹೇಳಿದ್ದಾರೆ.

‘ ಫಲಾನುಭವಿಗಳಿಗೆ ಯೋಜನೆ ತಲುಪಲು ಬಿಡಬೇಕು. ಇಲ್ಲವಾದಲ್ಲಿ ಶಾಸಕ ಎಂ.ಚಂದ್ರಪ್ಪ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ‘ ಎಂದು ಹೆಚ್.ಆಂಜನೇಯ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com