ಸೈಕಲ್ ರವಿಗೆ ನಾನು ಕರೆ ಮಾಡಿಲ್ಲ, ಅಂತಹವರೊಂದಿಗೆ ನನಗೆ ಸಂಪರ್ಕವಿಲ್ಲ : ಎಂ ಬಿ ಪಾಟೀಲ್

ಬೆಂಗಳೂರು : ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿ ಜೊತೆಗಿನ ಸಂಪರ್ಕ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ ನೀಡಿದ್ದು, ಸೈಕಲ್ ರವಿಗೂ ತನಗೂ ಯಾವುದೇ ಸಂಬಂಧವಿಲ್ಲ. ಅಂತಹವರೊಂದಿಗೆ ನಾನು ಸಂಪರ್ಕವಿಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳ ವರದಿಗೆ ಸಂಬಂಧಿಸಿದಂತೆ ಇಂದು ಖುದ್ದು ತಾವೇ ಕರೆ ಮಾಡಿ ಮಾತನಾಡಿದ ಎಂಬಿ ಪಾಟೀಲ್ ಅವರು, ನಾನು ಸೈಕಲ್ ರವಿಗೆ ಎಂದೂ ಕರೆ ಮಾಡಿಲ್ಲ. ಆತ ಯಾರೂ ಎಂದೂ ತಿಳಿದಿಲ್ಲ. ಟಿವಿಯಲ್ಲಿ ತೋರಿಸುತ್ತಿರುವ ದೂರವಾಣಿ ಸಂಖ್ಯೆ ನನ್ನದೇ.. ಆದರೆ ನಾನು ಕರೆ ಮಾಡಿದ್ದು ಸೈಕಲ್ ರವಿಗೆ ಅಲ್ಲ. ಸಚ್ಚಿದಾನಂದ ಅವರಿಗೆ ಎಂದು ತಿಳಿಸಿದ್ದಾರೆ.
 ಎಂಬಿ ಪಾಟೀಲ್ ಅವರು ಹೇಳಿಕೊಂಡಂತೆ ಸಚ್ಚಿದಾನಂದ ಎನ್ನುವವರು ಅಂಬರೀಷ್ ಅವರ ಆಪ್ತರಾಗಿದ್ದು, ಅವರ ಮೂಲಕವೇ ತನಗೂ ಪರಿಚಯ. ನಾನು ಸಚ್ಚಿದಾನಂದ ಸ್ನೇಹಿತರಾಗಿದ್ದು, ನಿತ್ಯ ಕರೆ ಮಾಡಿ ಮಾತನಾಡುತ್ತಿದ್ದೆ. ಕಳೆದ ವಾರ ಕೂಡ ಕರೆ ಮಾಡಿ ಆತನೊಂದಿಗೆ ಮಾತನಾಡಿದ್ದೇನೆ. ಇದು ಸಚ್ಚಿದಾನಂದನ ಮೊಬೈಲ್ ಸಂಖ್ಯೆಯೇ ಹೊರತು ಸೈಕಲ್ ರವಿಯದ್ದಲ್ಲ ಎಂದು ಹೇಳಿದ್ದಾರೆ. ಇದೇ ವಿಚಾರವಾಗಿ ಕರೆ ಮಾಡಿದ್ದ ಎಂಬಿ ಪಾಟೀಲ್ ಅವರ ಆಪ್ತ ಸಚ್ಚಿದಾನಂದ ಅವರೂ ಕೂಡ ಆ ಸಂಖ್ಯೆ ನನ್ನದು ಎಂದು ಪ್ರತಿಕ್ರಿಯಿಸಿದ್ದಾರೆ.
Image result for m b patil
ಇನ್ನು ಅಪಹರಣ ಮತ್ತು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇತ್ತೀಚೆಗೆ ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿಯನ್ನು ಬಂಧಿಸಿದ್ದರು. ಅಲ್ಲದೆ ಆತನಿಂದ ಸುಮಾರು 11 ಮೊಬೈಲ್ ಫೋನ್ ಗಳು ಹಾಗೂ ಸುಮಾರು 28 ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದರು. ಈ 38 ಸಿಮ್ ಕಾರ್ಡ್ ಗಳ ಪೈಕಿ ಒಂದು ಸಿಮ್ ಕಾರ್ಡ್ ನಲ್ಲಿ ನಲ್ಲಿ ಎಂಬಿ ಪಾಟೀಲ್ ಅವರ ನಂಬರ್ ದಾಖಲಾಗಿತ್ತು. ಅಲ್ಲದೆ ಪಾಟೀಲ್ ನಂಬರ್ ನಿಂದ ಆ ಸಿಮ್ ಕಾರ್ಡ್ ಸುಮಾರು 80 ಬಾರಿ ದೂರವಾಣಿ ಸಂಭಾಷಣೆ ನಡೆದಿತ್ತು. ಅಲ್ಲದೆ 2 ಎಸ್ ಎಂಎಸ್ ಕೂಡ ರವಾನೆಯಾಗಿತ್ತು ಎನ್ನಲಾಗಿದೆ.
Image result for cycle ravi
ಅಂತೆಯೇ ಸೈಕಲ್ ರವಿಯದ್ದು ಎಂದು ಹೇಳಲಾಗಿರುವ ದೂರವಾಣಿ ಸಂಖ್ಯೆಗೆ ಎಂಬಿ ಪಾಟೀಲ್ ಫೋನ್ ನಂಬರ್ ನಿಂದ 24 ಬಾರಿ ಕರೆ ಬಂದಿತ್ತು ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದೆ ಇದೇ ಸೈಕಲ್ ರವಿಗೆ ಖ್ಯಾತ ಹಾಸ್ಯನಟ ಹಾಗೂ ಸಂಗೀತ ನಿರ್ದೇಶಕ ಸಾಧುಕೋಕಿಲ ಅವರೊಂದಿಗೆ ಸಂಪರ್ಕವಿದೆ ಎಂದು ಹೇಳಲಾಗಿತ್ತು. ಆದರೆ ಸಾಧುಕೋಕಿಲ ಅವರೂ ಕೂಡ ಈ ಆರೋಪವನ್ನು ನಿರಾಕರಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com