ಅಳಬೇಡಿ ಕುಮಾರಸ್ವಾಮಿಯವರೇ ನಿಮ್ಮೊಂದಿಗೆ ನಾವಿದ್ದೇವೆ : ಹಾಸನದ ಪುಟಾಣಿ ಮನವಿ

ಬೆಂಗಳೂರು : ಬೆಂಗಳೂರಿನಲ್ಲಿರುವ ಜೆಡಿಎಸ್ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಭಾವುಕಾರದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರಿಗೆ ಹಾಸನ  ಪುಟಾಣಿಯೊಬ್ಬಳು  ಅಳಬೇಡಿ ಕುಮಾರಸ್ವಾಮಿಗಳೇ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಂತ್ವನ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡತ್ತಿದೆ.

ಹಾಸನದ ಬಾಲಕಿ ಅರುಂಧತಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಒಮ್ಮೆ ನಮ್ಮೂರಿಗೆ ಬಂದು ನೋಡಿ ನಾನು ಹುಟ್ಟಿದಾಗಿನಿಂದ ಮಳೆಯೇ ಆಗಿರಲಿಲ್ಲ, ಕೆರೆಗಳನ್ನು ತುಂಬಿದ್ದೇ ನೋಡಿರಲಿಲ್ಲ, ನಿಮ್ಮ ಸಾಲ ಮನ್ನವೇ ಬೇಡ ನಾವು ಖುಷಿಯಾಗಿದ್ದೇವೆ,  ನೀವು ಮುಖ್ಯಮಂತ್ರಿಯಾದಗನಿಂದ ಎಷ್ಟು ಚೆನ್ನಾಗಿದೆ ಒಮ್ಮೆ ನೋಡಿ, ನೀವು ಹೆದರಬೇಡಿ ನಿಮ್ಮೊಟ್ಟಿಗೆ ನಾವು ರೈತರ ಮೊಮ್ಮಕ್ಕಳಿದ್ದೇವೆ, ದಯವಿಟ್ಟು ನೀವು ಅಳಬೇಡಿ,ನಮ್ಮಗೂ ಅಳು ಬರುತ್ತದೆ,  ನಿಮ್ಮೊಂದಿಗೆ ನಾವಿದ್ದೇವೆ ಎಂಬ ಪುಟಾಣಿ  ಧೈರ್ಯ ತುಂಬಿದ್ದಾಳೆ.

HD Kumaraswamy

ಎಲ್ಲಾ ವಿಷವನ್ನ ನಾನೇ ಕುಡಿದು ವಿಷಕಂಠನಾಗಿ ಬದುಕುತ್ತಿದ್ದೇನೆ ಎಂದು ಸಿಎಂ ಕುಮಾರಸ್ವಾಮಿಯವರು ಭಾವುಕಾರಗಿ ಕಣ್ಣೀರು ಹಾಕಿದ್ದು ಈಗಾಗಲೇ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಇದಕ್ಕೆ ಸಿಎಂ ತವರಿನ ಪುಟಾಣಿಯೊಬ್ಬಳು, ಕುಮಾರಸ್ವಾಮಿಯವರಿಗೆ ಸಾಂತ್ವನ ಹೇಳುವ ವಿಡಿಯೋವೊಂದು ಫೇಸ್‍ಬುಕ್‍ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

 

Leave a Reply

Your email address will not be published.