WATCH : ಕ್ರಿಸ್ ಗೇಯ್ಲ್ ಪಡೆದ ಅದ್ಭುತ ಕ್ಯಾಚ್ : ನೋಡಿ ಅವಾಕ್ಕಾದ ಅಭಿಮಾನಿಗಳು..!

ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬೌಲರ್ಗಳ ದುಸ್ವಪ್ನವಾಗಿ ಕಾಡುವ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅವರನ್ನು ಅಭಿಮಾನಿಗಳು ‘ಯೂನಿವರ್ಸ್ ಬಾಸ್’ ಎಂದೇ ಕರೆಯುತ್ತಾರೆ. ಸೋಮವಾರ ನಡೆದ ಟಿ-20 ಪಂದ್ಯವೊಂದರಲ್ಲಿ ಕ್ರಿಸ್ ಗೇಯ್ಲ್ ಅದ್ಭುತ ಕ್ಯಾಚ್ ಪಡೆದಿದ್ದಾರೆ.

ಕೆನಡಾದಲ್ಲಿ ವ್ಯಾಂಕೋವರ್ ನೈಟ್ಸ್ ಹಾಗೂ ವೆಸ್ಟ್ ಇಂಡೀಸ್ ಬಿ ತಂಡಗಳ ನಡುವೆ ಗ್ಲೋಬಲ್ ಟಿ-20 ಟೂರ್ನಿಯ ಫೈನಲ್ ಪಂದ್ಯ ನಡೆಯಿತು. ಸ್ಲಿಪ್ ಕ್ಷೇತ್ರದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕ್ರಿಸ್ ಗೇಯ್ಲ್ಚತಮ್ಮ ಎಡಕ್ಕೆ ಡೈವ್ ಮಾಡಿ ಅದ್ಭುತ ರೀತಿಯಲ್ಲಿ ಕ್ಯಾಚ್ ಪಡೆದಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com