ಚೆನ್ನೈ: 11ರ ಬಾಲಕಿ ಮೇಲೆ 22 ಕಾಮುಕರ ಅಟ್ಟಹಾಸ, ದೇಶವನ್ನೇ ಬೆಚ್ಚಿ ಬೀಳಿಸುವ ಕೃತ್ಯ ಬೆಳಕಿಗೆ

ಚೆನ್ನೈ: ಚೆನ್ನೈನ ಅಪಾರ್ಟ್​​ಮೆಂಟ್​​​ನಲ್ಲಿ 11 ವರ್ಷದ ಬಾಲಕಿಯೊಬ್ಬಳಿಗೆ ಸೆಕ್ಯೂರಿಟಿ ಗಾರ್ಡ್​​, ಲಿಫ್ಟ್​​ ಆಪರೇಟರ್​ ಹಾಗೂ ವಾಟರ್​​ ಸಪ್ಲೈರ್ಸ್​​ ಸೇರಿದಂತೆ 22 ಕಾಮುಕರು ಹಲವು ಬಾರಿ ಲೈಂಗಿಕ ಬಲತ್ಕಾರ ಎಸಗಿರುವ ಪ್ರಕರಣವೊಂದು  ಬೆಳಕಿಗೆ ಬಂದಿದೆ.
ರಾಜಧಾನಿ ಚೆನ್ನೈನಲ್ಲಿ ಈ ಭೀಕರ ಕೃತ್ಯ ಬಯಲಿಗೆ ಬಂದಿದ್ದು,  22 ಕಾಮುಕರ ಪೈಕಿ 18 ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದ್ದಾರೆ. ಚೈನ್ನೈನ  ಪಿರಸವಾಲ್ಕಂ ಅಪಾರ್ಟ್​​ಮೆಂಟ್​​​ನಲ್ಲಿ 7ನೇ ತರಗತಿ ಬಾಲಕಿ ಮೇಲೆ 7 ತಿಂಗಳಿಂದ ನಿರಂತರವಾಗಿ ಬಲತ್ಕಾರ ಎಸಲಾಗುತ್ತಿತ್ತು. ಇಂಜೆಕ್ಷನ್ ಹಾಗೂ ಮತ್ತು ಬರಿಸುವ ಪಾನೀಯವನ್ನು ಕುಡಿಸಿ ಬಾಲಕಿ ಮೇಲೆ ಕೃತ್ಯ ಎಸಲಾಗುತ್ತಿತ್ತು ಎನ್ನಲಾಗಿದೆ.  ಅಲ್ಲದೇ, ಈ ಕೀಚಕರು ತಮ್ಮ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಸಂತ್ರಸ್ತ  ಬಾಲಕಿಗೆ ಬೆದರಿಕೆವೊಡಿದ್ದರು ಎಂದು ತಿಳಿದುಬಂದಿದೆ.

ಈ ನಡುವೆ ದೆಹಲಿಯಲ್ಲಿದ್ದ  ತನ್ನ ಹಿರಿಯ ಸಹೋದರಿ ಮನೆಗೆ ಬಂದಿದ್ದು, ಶನಿವಾರ ಕಾಮುಕರು ಅಟ್ಟಹಾಸವನ್ನು ಸಂತಸ್ತೆ ಬಿಚ್ಚಿಟ್ಟಿದ್ದಾಳೆ. ಅಂತೆಯೇ ಹಿರಿಯ ಸಹೋದರಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಬಾಲಕಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ 22 ಕಾಮುಕರ ಪೈಕಿ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Related image
ಸಂತ್ರಸ್ತ ಬಾಲಕಿಯ ಅಪ್ಪ ಕೆಲಸದ ನಿಮಿತ್ತ ಬಹುಪಾಲು ಹೊರಗೆಯೇ ಇರುತ್ತಿದ್ದರು. ಇತ್ತ, ಮನೆಯಲ್ಲೇ ಇರುತ್ತಿದ್ದ ಅಮ್ಮ, ಮಗಳು ಶಾಲೆಯಿಂದ ಲೇಟಾಗಿ ಬರುತ್ತಿದ್ದರು ಪ್ರಶ್ನಿಸಿರಲಿಲ್ಲ ಎನ್ನಲಾಗಿದೆ.  ಮಗಳು ತನ್ನ ಸ್ನೇಹಿತರೊಂದಿಗೆ ಆಟವಾಡಿಕೊಂಡು ಮನೆಗೆ ತಡವಾಗಿ ಬರುತ್ತಾಳೆ ಎಂದು ತಿಳಿದು ಅಮ್ಮ ಸುಮ್ಮನಾಗಿದ್ದಳಂತೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವೇಳೆ ಆಕೆ ಮೇಲೆ ಹಲವು ಬಾರಿ, ಬಲತ್ಕಾರ ಎಸಗಿರುವುದು ಬೆಳಕಿಗೆ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

4 thoughts on “ಚೆನ್ನೈ: 11ರ ಬಾಲಕಿ ಮೇಲೆ 22 ಕಾಮುಕರ ಅಟ್ಟಹಾಸ, ದೇಶವನ್ನೇ ಬೆಚ್ಚಿ ಬೀಳಿಸುವ ಕೃತ್ಯ ಬೆಳಕಿಗೆ

Leave a Reply

Your email address will not be published.

Social Media Auto Publish Powered By : XYZScripts.com