ಮುಂಬೈ : ಕಿಡ್ನಿ ಸಮಸ್ಯೆಯಿಂದ ಕೊನೆಯುಸಿರೆಳೆದ ಬಾಲಿವುಡ್ ಹಿರಿಯ ನಟಿ ರೀಟಾ ಭಾದುರಿ..!

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ವಿಲೆ ಪಾರ್ಲೆಯಲ್ಲಿರುವ ಸುಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ರೀಟಾಗೆ 62 ವರ್ಷ ವಯಸ್ಸಾಗಿತ್ತು. ಕಭಿ ಖುಷಿ ಕಭಿ ಗಮ್​​, ಕ್ಯಾ ಕೆಹೆನಾ, ದಿಲ್ ವಿಲ್ ಪ್ಯಾರ್​​, ಮೆ ಮಾಧುರಿ ದೀಕ್ಷಿತ್ ಬನ್ನಾ ಚಾತೆ ಹೋ ಸೇರಿ ಬಹಳಷ್ಟು ಗುಜರಾತಿ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದರು.
Image result for rita madhuri
ಇನ್ನು ಕಿರುತೆರೆಯಲ್ಲಿ ಅವರು ಅಭಿನಯಿಸಿರುವ ಹಸ್​​​ರತೇ, ಸಾರಾಭಾಯಿ vs ಸಾರಾಭಾಯಿ, ಖಿಚಡಿ, ಏಕ್ ನಹಿ ಪೆಹಚಾನೆ, ಅಮಾನತ್​​, ಏಕ್​​ ಮಹಲ್ ಹೋ ಸಪ್ನೋ ಕ, ಕುಂಕುಮ್ ಧಾರಾವಾಹಿಗಳು ಬಹಳ ಫೇಮಸ್​. ನಟ ಶಿಶಿರ್ ಶರ್ಮಾ ನಟಿ ರೀಟಾ ನಿಧನದ ಸುದ್ದಿಯನ್ನು ಅವರ ಫೇಸ್​​ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ. ‘ರೀಟಾ ಅವರ ನಿಧನಕ್ಕೆ ನಾವು ಸಂತಾಪ ಸೂಚಿಸುತ್ತಿದ್ದೇವೆ. ಒಂದು ಒಳ್ಳೆಯ ವ್ಯಕ್ತಿತ್ವವನ್ನು ನಾವು ಇಂದು ಕಳೆದುಕೊಂಡಿದ್ದೇವೆ. ಅಮ್ಮ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಇಂದು ಮಧ್ಯಾಹ್ನ ಪಾರ್ಸಿ ವಾಡಾ ರಸ್ತೆ, ಅಂಧೇರಿ ಈಸ್ಟ್​​​ , ಮುಂಬೈನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ನಟ ಶಿಶಿರ್ ಶರ್ಮಾ ಹೇಳಿದ್ದಾರೆ

2 thoughts on “ಮುಂಬೈ : ಕಿಡ್ನಿ ಸಮಸ್ಯೆಯಿಂದ ಕೊನೆಯುಸಿರೆಳೆದ ಬಾಲಿವುಡ್ ಹಿರಿಯ ನಟಿ ರೀಟಾ ಭಾದುರಿ..!

Leave a Reply

Your email address will not be published.