Tennis : ನೊವಾಕ್ ಜಾಕೊವಿಕ್ ಮಡಿಲಿಗೆ ವಿಂಬಲ್ಡನ್ ಪ್ರಶಸ್ತಿ : ಆ್ಯಂಡರ್ಸನ್ ಪರಾಭವ

ಸರ್ಬಿಯಾದ ನೊವಾಕ್ ಡಿ ಜಾಕೊವಿಕ್ 2018ನೇ ಸಾಲಿನ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ರವಿವಾರ ಲಂಡನ್ನಿನಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಅವರನ್ನು 6-2, 6-2, 7-6 (7-3) ನೇರ ಸೆಟ್ ಗಳಲ್ಲಿ ಮಣಿಸಿದ ಜಾಕೊವಿಕ್ ವಿಂಬಲ್ಡನ್ ಚಾಂಪಿಯನ್ ಎನಿಸಿದ್ದಾರೆ. ಇದು ನೊವಾಕ್ ಡಿ ಜಾಕೊವಿಕ್ ಜಯಿಸಿದ 13ನೇ ಗ್ರ್ಯಾಂಡ್ ಸ್ಲಾಮ್ ಹಾಗೂ 4ನೇ ವಿಂಬಲ್ಡನ್ ಪ್ರಶಸ್ತಿಯಾಗಿದೆ.

ಏಕಪಕ್ಷೀಯವಾಗಿದ್ದ ಫೈನಲ್ ಪಂದ್ಯ ಸುಮಾರು 2 ಗಂಟೆ 18 ನಿಮಿಷಗಳ ಕಾಲ ನಡೆಯಿತು. ಅತ್ಯುತ್ತಮ ಪ್ರದರ್ಶನ ತೋರಿದ ಜಾಕೊವಿಕ್ ಎದುರಾಳಿ ಆ್ಯಂಡರ್ಸನ್ ಗೆ ಯಾವುದೇ ಅವಕಾಶ ನೀಡದೇ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದರು.

 

 

Leave a Reply

Your email address will not be published.