ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ನಿರ್ಮಾಣ : ಪರಮೇಶ್ವರ್ – ಸುಧಾಮೂರ್ತಿ ಭೇಟಿ

ಕೊಣಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ನಿರ್ಮಾಣದ ಎಂಒಯು ಮಾಡಿಕೊಳ್ಳುವ ಸಂಬಂಧ ಇದೇ‌ ಜುಲೈ 19 ರಂದು ಕಾರ್ಯಕ್ರಮ ಆಯೋಜಿಸಿದ್ದು, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಇನ್‌ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರು ಸೋಮವಾರ ವಿಧಾನಸೌಧಕ್ಕೆ ಭೇಟಿ ನೀಡಿ ಆಹ್ವಾನಿಸಿದರು.

ಸಭೆಯಲ್ಲಿ ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ವಸತಿ ಹಾಗೂ ಪೊಲೀಸ್ ಠಾಣೆ ನಿರ್ಮಾಣ ಮಾಡಿಕೊಡುವ ಸಂಬಂಧ ಸುಧಾಮೂರ್ತಿ ಅವರೊಂದಿಗೆ ಚರ್ಚಿಸಿದರು. ಠಾಣೆ ನಿರ್ಮಾಣ ಮಾಡಿಕೊಡುವಂತೆ ಅವರಿಗೆ ಮನವಿ‌ ಮಾಡಿದ್ದೇವೆ. ಅವರು ಕೂಡ ಧನಾತ್ಮಕವಾಗಿ ಸ್ಪಂದಿಸಿದ್ದಾರೆ‌ ಎಂದು ಪರಮೇಶ್ವರ್ ಸುದ್ದಿಗಾರರಿಗೆ ತಿಳಿಸಿದರು.

ಸರಕಾರದ ವತಿಯಿಂದ ಪೊಲೀಸರಿಗೆ 11ಸಾವಿರ ವಸತಿ ನಿರ್ಮಾಣವಾಗುತ್ತಿದ್ದು ಈಗಾಗಲೇ 7 ಸಾವಿರ ವಸತಿ‌ ನಿರ್ಮಿಸಲಾಗಿದೆ. ಪೊಲೀಸರಿಗೆ ಸೂಕ್ತ ವಸತಿ ಸೌಲಭ್ಯ ನಿರ್ಮಿಸಿಕೊಡುವುದು ನಮ್ಮ‌ಜವಾಬ್ಧಾರಿ. ಇದಕ್ಕೆ ಕಾರ್ಪೋರೇಟ್ ಕಂಪನಿಗಳು ಜೊತೆಯಾದರೆ ಉತ್ತಮ ಸೌಲಭ್ಯ ಒದಗಿಸಿಕೊಡಲು ಸಾಧ್ಯ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com